19.2 C
ಪುತ್ತೂರು, ಬೆಳ್ತಂಗಡಿ
January 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಅ.ಭಾ.ಸಾ.ಪ. ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ಮೊದಲ ಅಧ್ಯಾಯ

ಗುರುವಾಯನಕೆರೆ: ನಮ್ಮ ಮನೆ ಹವ್ಯಕ ಭವನದಲ್ಲಿ ಅ.ಭಾ ಸಾ.ಪ . ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರಾದ ಗಣಪತಿ ಕುಳಮರ್ವ ಇವರ ಅಧ್ಯಕ್ಷತೆಯಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ಮೊದಲ ಅಧ್ಯಾಯವು ಜ.19ರಂದು ನಡೆಯಿತು.

ಕಾರ್ಯಕ್ರಮಕ್ಕೆ ಹವ್ಯಕ ಭವನದ ಕ್ರಿಯಾ ಸಮಿತಿಯ ಕಾರ್ಯದರ್ಶಿ ವೆಂಕಪ್ಪಯ್ಯ ದೀಪ ಪ್ರಜ್ವಲಿಸಿ, ಶಾರದಾ ಮಾತೆ ಮತ್ತು ಭಾರತಾಂಬೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಗೈಯುವುದರ ಮೂಲಕ ಚಾಲನೆಯನ್ನು ನೀಡಿ ಶುಭ ಹಾರೈಸಿದರು.
ಅತಿಥಿಗಳಾದ ವೆಂಕಪ್ಪಯ್ಯ ಇವರನ್ನು ಪ್ರೊ. ಗಣಪತಿ ಕುಳಮರ್ವ ಇವರು ಮತ್ತು ಸಂಪನ್ಮೂಲ ವ್ಯಕ್ತಿ ಡಾ. ಶ್ರೀಧರ್ ಭಟ್ ಇವರನ್ನು ಶ್ರೀಮತಿ ಸುಭಾಷಿಣಿ ಇವರು ತಾಂಬೂಲ ನೀಡಿ ಗೌರವಿಸಿದರು.

ಸಮಿತಿಯ ಸದಸ್ಯೆ ಶ್ರೀಮತಿ ಸಂತೋಷಿನಿ ಇವರು ಶಾರದೆಯನ್ನು ಸ್ತುತಿಸಿದರು. ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರ ರಚನೆಯ ಆಶಯಗೀತೆಯನ್ನು ಶ್ರೀಮತಿ ಅಶ್ವಿಜ ಶ್ರೀಧರ್ ಇವರು ರಾಗ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿದರು.
ಡಾ. ಶ್ರೀಧರ ಭಟ್ ಇವರು ಗೀತೆಯ ಸ್ವರೂಪ,ಸಾರ, ಅದು ಸಾಹಿತ್ಯಕ್ಕೆ ಹೇಗೆ ಆಧಾರಶಿಲೆಯಾಗಿದೆ ಎನ್ನುವುದನ್ನು ಮಾತನಾಡಿ, ಜೀವನ ಪದ್ಧತಿಯನ್ನು ತಿಳಿಸುವ ಗೀತೆಯ ಸಾರದಂತೆ ಜೀವನದ ಯಾವುದೇ ಕ್ಲಿಷ್ಟಕರ ಸನ್ನಿವೇಶದಲ್ಲಿ ಪಲಾಯನ ಮಾಡದೆ, ಯಾವುದೇ ಬಂಧಗಳಿಗೆ ಅಂಟಿಕೊಳ್ಳದೆ ಧೈರ್ಯದಿಂದ ಎದುರಿಸಬೇಕು ಎಂದು ಉದಾಹರಣೆಗಳೊಂದಿಗೆ ಬಹಳ ಮನೋಜ್ಞವಾಗಿ ತಿಳಿಸಿದರು.


ಕಾರ್ಯಕ್ರಮದ ಅತಿಥಿಗಳಾದ ವೆಂಕಪ್ಪಯ್ಯ ಇವರಿಗೆ ಹಿರಿಯರಾದ ಗೋಪಾಲಕೃಷ್ಣರಾವ್ ಅಡೂರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ಶ್ರೀಧರ್ ಭಟ್ ಇವರಿಗೆ ವೇದವ್ಯಾಸ ಶಿಶು ಮಂದಿರದ ಅಧ್ಯಕ್ಷರಾದ ಶ್ರೀಮತಿ ಇಂದುಮತಿ ಇವರು ಪುಸ್ತಕ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಮಕ್ಕಳ ಪ್ರಕಾರದ ಪ್ರಮುಖ್ ಶ್ರೀಮತಿ ಮೇಧ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ ಧನ್ಯವಾದವನ್ನಿತ್ತರು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಪ್ರಕಾರ ಪ್ರಮುಖರು ಮತ್ತು ಸದಸ್ಯರು, ನಮ್ಮ ಮನೆ ಹವ್ಯಕ ಭವನ ಕ್ರಿಯಾ ಸಮಿತಿಯ ಸದಸ್ಯರು, ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸದಸ್ಯರು, ಸ್ಥಳೀಯ ಭಜನಾ ಮಂಡಲದ ಪದಾಧಿಕಾರಿಗಳು ಸದಸ್ಯರು, ವೇದವ್ಯಾಸ ಶಿಶುಮಂದಿರದ ಪದಾಧಿಕಾರಿಗಳು, ಹಾಗೂ ಊರಿನ ಮಹನೀಯರು ಮತ್ತು ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಪ್ರಥಮ ಅಧ್ಯಾಯದ ಪ್ರಯೋಜನವನ್ನು ಪಡೆದುಕೊಂಡರು.

Related posts

ಮಂಜೊಟ್ಟಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಕೊಕ್ಕಡ: ಅಲ್ಲಲ್ಲಿ ಮರ ಬಿದ್ದು, ವಿದ್ಯುತ್, ಮನೆಗಳಿಗೆ ಹಾನಿ: ತಕ್ಷಣ ಸ್ಪಂದಿಸಿದ ಹರೀಶ್ ಪೂಂಜ

Suddi Udaya

ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಆರಿಕೋಡಿಯ ಧರ್ಮದರ್ಶಿ ಹರೀಶ್ ದಂಪತಿಗಳಿಂದ ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ನಂದಗೋಕುಲ ಗೋಶಾಲೆಗೆ ಗೊಗ್ರಾಸಕ್ಕಾಗಿ ರೂ.25,000 ದೇಣಿಗೆ ಹಸ್ತಾಂತರ

Suddi Udaya

ಗುರುವಾಯನಕೆರೆ ಕೆರೆ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ: ತಪ್ಪಿದ ಅನಾಹುತ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಲ್ಯಾನ್ಸಿ ಫೆರ್ನಾಂಡಿಸ್ ಇಸ್ರೇಲ್ ನಲ್ಲಿ ನಿಧನ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ “ಅಂತರಾಷ್ಟ್ರೀಯ ಯೋಗ ದಿನಾಚರಣೆ”

Suddi Udaya
error: Content is protected !!