33.3 C
ಪುತ್ತೂರು, ಬೆಳ್ತಂಗಡಿ
January 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು ಗ್ರಾ.ಪಂ. ನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

ಬೆಳಾಲು: ಬೆಳಾಲು ಗ್ರಾಮ ಪಂಚಾಯತ್ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ 3ನೇ ವರ್ಷದ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ ಪಂಚಾಯಿತಿ ಸಭಾಭವನದಲ್ಲಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿನ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ವಹಿಸಿಕೊಂಡು ವಿಶೇಷ ಚೇತನ ಮಕ್ಕಳು ದೇವರ ಸಮಾನ ಅವರನ್ನು ದೇವರಾಗಿ ಕಾಣಿ ಹೊರತಾಗಿ ಹೊರೆಯಾಗಿ ಕಾಣಬೇಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರೋತ್ಸಾಹವನ್ನು ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ವಸಂತ ಮರಕಡ ನೆರವೇರಿಸಿ ವಿಶೇಷ ಚೇತನರು ದೇವರ ಮಕ್ಕಳು ದೇವರ ಆಲಯಕ್ಕೆ ಇಂದು ನಾನು ಬಂದಿದ್ದೇನೆ .ವಿಶೇಷ ಚೇತನರು ಅಬಲರಲ್ಲ ಸಬಲರು ಅನುಕಂಪ ಹೊರತಾಗಿ ಅವಕಾಶ ನೀಡಬೇಕು ಎಂದು ಹೇಳಿದರು.

ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ ತಾಲೂಕು ವಿವಿಧೋದ್ದೇಶ ಪುನರ್ವಸತಿ ಸಂಯೋಜಕ ಜೋನ್ ಬ್ಯಾಷ್ಟಿಸ್ಟ್ ಡಿಸೋಜಾ ಮಾತನಾಡಿ ತಾಲೂಕಿನಲ್ಲಿ 48 ಗ್ರಾಮಗಳಲ್ಲಿ ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ನಡೆದ ಈ ಸಭೆಯು ತಾಲೂಕಿಗೆ ಮಾದರಿ ಇದು ಪಂಚಾಯತ್ ಆಡಳಿತ ಮಂಡಳಿ ಮತ್ತು ಊರ ದಾನಿಗಳ ಸಹಕಾರದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು .

ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಜಾಹ್ನವಿ ಇವರನ್ನು ಸನ್ಮಾನಿಸಿ ವಸಂತ ಮರಕಡ ಇವರು ಪ್ರೋತ್ಸಾಹ ಧನ ನೀಡಿದರು ಹಾಗೂ ಅಶೋಕ್ ನಾಯ್ಕ ಪಲ್ಲಿದಡ್ಕ ಹೇಮನಾಥ್ ನಾಯ್ಕ ಸುರುಳಿ ಇವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ವತಿಯಿಂದ 12 ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ದಾನಿಗಳಾದ ಜಯಣ್ಣ ಮಿನಂದೇನುಲು, ಶ್ರೀನಿವಾಸ್ ಗೌಡ ನೋಟರಿ ವಕೀಲರು, ಸುರೇಶ್ ದಾಸ್ ಗಾಂಧಿನಗರ ಮಾಯಾ, ಲಕ್ಷ್ಮಣ ಪೂಜಾರಿ ಪಳಸಾ ಮಾಯ 57 ವಿಕಲಚೇತನರಿಗೆ ತಲಾ 5 ಕೆಜಿ ಅಕ್ಕಿಯನ್ನು ನೀಡಿದರು.

ಶಾಮಿಯಾನದ ಪ್ರಯೋಜಕರಾದ ಅರ್ಚನ್ ಸೌತೆ ಗದ್ದೆ, ಸೌಂಡ್ ಪ್ರಯೋಜಕರಾಗಿ ಸಂತೋಷ್ ಕನಿಕಿಲ, ಊಟೋಪಚಾರದ ಪ್ರಾಯೋಜಕರಾಗಿ ವಿಮಲಾ ನಾಯ್ಕ, ಕಾರ್ಯದರ್ಶಿ ಕಾವಲಪಡೂರು ಸಹಕರಿಸಿದರು.

ವೇದಿಕೆಯಲ್ಲಿ ಬೆಳಾಲು ಗ್ರಾಮ ಪಂಚಾಯಿತಿನ ಸದಸ್ಯರಾದ ದಿನೇಶ್ ಕೋಟ್ಯಾನ್ ಸತೀಶ್ ಎಳ್ಳುಗದ್ದೆ ,ಶ್ರೀಮತಿ ಪ್ರೇಮ , ಶ್ರೀಮತಿ ಓಬಕ್ಕ, ಯೋಗೀಶ್ ಸೌತೆ ಗದ್ದೆ ,ಜಯರಾಮ ಮಯ್ಯ ಮುಖ್ಯ ಉಪಾಧ್ಯಾಯರು ,ಎಂ ಜೆ ಜೋಸೆಫ್ ವಿ ಆರ್ ಡಬ್ಲ್ಯೂ ಇಂದಬೆಟ್ಟು ಮಜೀದ್ ಮುಂಡಾಜೆ ಉಪಸ್ಥಿತರಿದ್ದರು.

ನಾಡಗೀತೆಯನ್ನು ಪಂಚಾಯಿತಿ ಸಿಬ್ಬಂದಿ ಶಶಿಧರ ಓಡಿಪ್ರೊಟ್ಟು ಹಾಡಿ , ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತಾರಾನಾಥ್ ನಾಯಕ್ ಸ್ವಾಗತಿಸಿ, ಈರಣ್ಣ ವಿ ಆರ್ ಡಬ್ಲ್ಯೂ ಬೆಳಾಲು ಪ್ರಸ್ತಾವಿಕ ಹಾಗೂ ನಿರೂಪಿಸಿದರು. ಸದಸ್ಯ ಸತೀಶ್ ಎಳ್ಳುಗದ್ದೆ ಧನ್ಯವಾದವಿತ್ತರು.

Related posts

ಜ.18: ಗೇರುಕಟ್ಟೆ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ರವರ ಉರೂಸ್ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಐತಿಹಾಸಿಕ ಕಾರ್ಯಕ್ರಮ: ಸ್ವಸಹಾಯ ಸಂಘಗಳಿಗೆ ರೂ.605 ಕೋಟಿ ಲಾಭಾಂಶ ವಿತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Suddi Udaya

ಪುಂಜಾಲಕಟ್ಟೆ: ವ್ಯಕ್ತಿತ್ವ ವಿಕಸನ ಮತ್ತು ಸಮಯ ನಿರ್ವಹಣೆಯ ಬಗ್ಗೆ ಕಾರ್ಯಾಗಾರ

Suddi Udaya

ಬೆಳ್ತಂಗಡಿ : ಕುಣಿತ ಭಜನಾ ತರಬೇತಿ ನೀಡುತ್ತಿರುವ ತರಬೇತಿದಾರರುಗಳ ಸಭೆ: ಪ್ರಥಮ ಬಾರಿಗೆ ಭಜನೆಯಲ್ಲಿ ನಿನ್ನೆ ಇಂದು ನಾಳೆಯ ಬಗ್ಗೆ ಗಂಭೀರ ಚರ್ಚೆ

Suddi Udaya

ಕಲ್ಮಂಜ: ಆಟೋ ಚಾಲಕ ಪ್ರಮೋದ್ ಗೌಡ ನೇಣು ಬಿಗಿದು ಆತ್ಮಹತ್ಯೆ

Suddi Udaya

ನಾಲ್ಕೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ಪ್ರಣಾಮ್ ಶೆಟ್ಟಿ, ಕಾರ್ಯದರ್ಶಿಯಾಗಿ ದಿನೇಶ್ ಪೂಜಾರಿ

Suddi Udaya
error: Content is protected !!