ಬಂದಾರು : ಇಲ್ಲಿಯ ಖಂಡಿಗ ವಾಸಪ್ಪ ಗೌಡ ಅವರ ಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣದಲ್ಲಿ ದಾನಿಗಳಿಂದ ಸಂಗ್ರಹಿಸಿದ ರೂ. 2,10,000 ( ಎರಡು ಲಕ್ಷ ದ ಹತ್ತು ಸಾವಿರ ) ವನ್ನು ಸಮಾಜ ಸೇವಕ ಅಶೋಕ್ ಕುಲಾಲ್ ಕಣಿಯೂರು ರವರು ಅವರ ಮನೆಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಧರ್ಣಪ್ಪ ಗೌಡ ನಾವುಲೆ , ಅಜಯ್ ನಾವುಲೆ ಮತ್ತು ಜಯರಾಮ ಹಲೇಜಿ ಉಪಸ್ಥಿತರಿದ್ದರು.