ಅಳದಂಗಡಿ: ಬಡಗಕಾರಂದೂರು ಗ್ರಾಮದ ಅಳದಂಗಡಿ ಕೆದ್ದು ಪರಿಸರದಲ್ಲಿ ಬಾಡ ಎಂಬ ವಯೋವೃದ್ದರು ನಿರ್ಗತಿಕರಾಗಿ ಹಲವಾರು ವರ್ಷಗಳಿಂದ ಅಂಗಡಿ ಮುಂಗಟ್ಟುಗಳ ಮುಂಬಾಗ ,ಮರಗಳ ಕೆಳಗೆ ಹೀಗೆ ಅನಾಥವಾಗಿ ಇರುತ್ತಿದ್ದರು. ಯಾರಿಂದಲೂ ಕೈ ಚಾಚದೆ ,ಯಾರಿಗೂ ಕಿರಿಕಿರಿ ಉಂಟು ಮಾಡದೆ ಸ್ವಾಭಿಮಾನಿಯಾಗಿದ್ದು ಬಾಡಜ್ಜ ಎಂದು ಸಾರ್ವಜನಿಕರಿಂದ ಕರೆಯಲ್ಪಡುತ್ತಿದ್ದರು.
ಸ್ಥಳೀಯರು ನೀಡಿದ ಅನ್ನ ಆಹಾರ ಸೇವಿಸುತ್ತಿದ್ದರು. ಇತ್ತೀಚೆಗೆ ಕೆಲವು ದಿನಗಳಿಂದ ವಿಪರೀತವಾಗಿ ಚೈತನ್ಯ ಕಳೆದುಕೊಂಡಿದ್ದು ಇದನ್ನರಿತ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಅಳದಂಗಡಿ ಸಮಾಜ ಸೇವಾ ಸಂಘಟನೆಯು ಅಳದಂಗಡಿ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಿ ವೇಣೂರು ಗುಂಡೂರಿಯ ಶ್ರೀ ಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ಕುಲಾಲ್ ಕಾಟಿಪಳ್ಳ ಹಾಗೂ ವೇಣೂರಿನ ಪೋಲೀಸ್ ಠಾಣೆಗೂ ಕೂಡ ಮಾಹಿತಿ ನೀಡಿ ವೀರಕೇಸರಿ ಬಳಂಜ ಇವರ ಅಂಬುಲೆನ್ಸ್ ನಲ್ಲಿ ಕರೆದೊಯ್ದು ವೇಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು. ಬಳಿಕ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ಸೇರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ದೇವದಾಸ್ ಸಾಲ್ಯಾನ್,ಅಳದಂಗಡಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಪೂರ್ಣಿಮ .ಜೆ , ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಆಚಾರ್ಯ ಮಿತ್ತರೋಡಿ, ಅಳದಂಗಡಿ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕೊರಗಪ್ಪ , ಸಾಮಾಜಿಕ ಕಾರ್ಯಕರ್ತೆ ಹರಿಣಿ ಲಕ್ಷ್ಮಣ ಪೂಜಾರಿ ,ಕೀರ್ತನ್ ಇವರುಗಳು ಸಹಕರಿಸಿದರು.
ವಯೋವೃದ್ದರಾದ ಬಾಡಜ್ಜರವರ ಬಂಧುಬಳಗದವರ ಮಾಹಿತಿ ಇದ್ದಲ್ಲಿ ವೇಣೂರು ಪೋಲೀಸ್ ಠಾಣೆಗೆ ನೀಡಿ ಸಹಕರಿಸಬೇಕು ಎಂದು ಶ್ರೀಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ರವರು ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ