September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸಂತ ತೆರೇಸಾ ಸಂಯುಕ್ತ ಪ. ಪೂರ್ವ ಕಾಲೇಜಿನಲ್ಲಿ ಸೈಬರ್ ಸೇಫ್ಟಿ ಹಾಗೂ ತಂತ್ರಜ್ಞಾನದ ಬಳಕೆಯ ಕಾರ್ಯಾಗಾರ

ಬೆಳ್ತಂಗಡಿ ಸಂತ ತೆರೇಸಾ ಸಂಯುಕ್ತ ಪ. ಪೂರ್ವ ಕಾಲೇಜಿನಲ್ಲಿ ಸೆ. 24ರಂದು ಪಿಯುಸಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಬರ್ ಸೇಫ್ಟಿ ಹಾಗೂ ತಂತ್ರಜ್ಞಾನದ ಬಳಕೆಯಲ್ಲಿ ಅನುಸರಿಸಬೇಕಾದ ಜಾಗರೂಕತೆಗಳ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಬೆಳ್ತಂಗಡಿಯ ಪ್ರಮುಖ ನ್ಯಾಯವಾದಿ ಬಿ.ಕೆ ನವೀನ್ ಕುಮಾರ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದು, ಇಂಟರ್ನೆಟ್ ಮತ್ತು ಡಿಜಿಟಲ್ ಸಾಧನಗಳನ್ನು ಬಳಸುವಾಗ ನಮ್ಮ ವೈಯುಕ್ತಿಕ ಮಾಹಿತಿ, ಖಾತೆಗಳು, ಸಾಧನೆಗಳ ಗೌಪ್ಯತೆಯನ್ನು ರಕ್ಷಿಸುವ ಕ್ರಮಗಳು ಹಾಗೂ ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್ ತಂತ್ರಜ್ಞಾನಗಳನ್ನು ಜಾಗರೂಕತೆಯಿಂದ ಇತರರಿಗೆ ಹಾನಿ ಮಾಡದಂತೆ ಸಮಾಜಕ್ಕೆ ಒಳ್ಳೆಯದನ್ನುಂಟು ಮಾಡುವ ರೀತಿಯಲ್ಲಿ ಬಳಕೆ ಮಾಡಬೇಕು ಎಂಬುದನ್ನು ಸವಿಸ್ತಾರವಾಗಿ ತಿಳಿಸಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಭಗಿನಿ ಮೋಲಿ ಡಿಕುಣ್ಣ ವಹಿಸಿದ್ದರು. ಕಾರ್ಯಕ್ರಮವನ್ನು ಕಾಲೇಜು ವಿದ್ಯಾರ್ಥಿನಿ ಫಾತಿಮಾ ರಿಧಾ ನಿರೂಪಿಸಿ ಮರಿಟ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Related posts

ಜನಪದ ಸಂದಿ ಪಾಡ್ದನದಲ್ಲಿ ಪ್ರಖ್ಯಾತರಾದ ಮಾಚಾರು ಗೋಪಾಲ ನಾಯ್ಕ ನಿಧನ

Suddi Udaya

ಕೇಳ್ತಾಜೆ: ಸಿರಾಜುಲ್ ಹುದಾ ಮದರಸ ಹಾಗೂ ಜುಮ್ಮಾ ಮಸ್ಜಿದ್ ನಲ್ಲಿ 79ನೇ ಸ್ವಾತಂತ್ರ‍್ಯ ದಿನಾಚರಣೆ

Suddi Udaya

ಕಡಿರುದ್ಯಾವರ ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲದಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಉಜಿರೆ ನಿನಾದ ಕ್ಲಾಸಿಕಲ್ಸ್ ನಲ್ಲಿ ನೋಂದಾವಣಿ ಆರಂಭ: ಒಂದೇ ಸೂರಿನಡಿಯಲ್ಲಿ ವಿವಿಧ ವಿದ್ಯೆಗಳನ್ನು ಕಲಿಯುವ ಸುವರ್ಣಾವಕಾಶ

Suddi Udaya

ಕಣಿಯೂರು ದೀಪಾ ಸಂಜೀವಿನಿ ಒಕ್ಕೂಟದ ಮಹಾಸಭೆ

Suddi Udaya

ಧರ್ಮಸ್ಥಳ: ದೊಂಡೋಲೆ ನಿವಾಸಿ ಪುಂಡಲೀಕ ಪ್ರಭು ನೇಣು ಬಿಗಿದುಕೊಂಡು ಆತ್ಮಹತ್ಯೆ

Suddi Udaya
error: Content is protected !!