April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಅಳದಂಗಡಿ ಗ್ರಾ.ಪಂಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ. ಭೇಟಿ: ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಪರಿಶೀಲನೆ

ಅಳದಂಗಡಿ: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಡಾ. ಆನಂದ ಕೆ. IAS ಅಳದಂಗಡಿ ಗ್ರಾ. ಪಂಗೆ ಭೇಟಿ ನೀಡಿ, ಸದ್ರಿ ಗ್ರಾ. ಪಂ ವ್ಯಾಪ್ತಿಯಲ್ಲಿ ಅನುಷ್ಟಾನಗೊಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸರಕಾರಿ ಪ್ರೌಢ ಶಾಲಾ ಶೌಚಾಲಯ, ಎನ್ಆರ್ ಎಲ್ ಎಮ್ ಶೆಡ್ ಸಮುದಾಯ ಕಾಮಗಾರಿಗಳನ್ನು ಪರಿಶೀಲಿಸಿದರು.

ಶಾಲಾ ಭೇಟಿ ವೇಳೆ ಎಸ್. ಎಸ್. ಎಲ್. ಸಿ ಮಕ್ಕಳೊಂದಿಗೆ ಪರೀಕ್ಷೆಯ ತಯಾರಿ ಕುರಿತು ಸಂವಾದ ನಡೆಸಿದರು.

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಗ್ರಾ. ಪಂ ಭೇಟಿ ಸಂದರ್ಭ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ನೀಡಿದರು.

ಈ ಸಂದರ್ಭ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಎನ್, ನರೇಗಾದ ಪ್ರಭಾರ ಸಹಾಯಕ ನಿರ್ದೇಶಕರು(ಗ್ರಾ. ಉ) ಶ್ರಿಮತಿ ಸಫಾನ, ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪೂರ್ಣಿಮಾ,ತಾಂತ್ರಿಕ ಸಂಯೋಜಕರು ( ಸಿವಿಲ್) ನಿತಿನ್ ರೖ, ತಾಂತ್ರಿಕ ಸಹಾಯಕರಾದ (ಕೃ/ತೋ/ಅ)ಪ್ರಾರ್ಥನಾ, ಲೀಸಾ ಡೆ ಸಾ, ತಾಲೂಕು ಐಇಸಿ ಸಂಯೋಜಕರು, ಗ್ರಾ. ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಿ.ಎಂ ಸಿದ್ದರಾಮಯ್ಯ ಹಾಗೂ ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಭೇಟಿ: ದೇವರಿಗೆ ವಿಶೇಷ ಪೂಜೆ

Suddi Udaya

ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ವತಿಯಿಂದ ವಿಶೇಷ ತರಬೇತಿ ದಿನಾಚರಣೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ಚುನಾವಣೆ: ಅಧ್ಯಕ್ಷರಾಗಿ ವಸಂತ ಮರಕ್ಕಡ, ಕಾರ್ಯದರ್ಶಿಯಾಗಿ ನವೀನ್ ಬಿ.ಕೆ ಆಯ್ಕೆ

Suddi Udaya

ಶಿಶಿಲ: ಗುಂಡಿಗಾಡು ನಿವಾಸಿ ದೇಜಮ್ಮ ನಿಧನ

Suddi Udaya

ಪಡ್ಯಾರಬೆಟ್ಟದ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಆಟಿ ಕೋಲ

Suddi Udaya

ಹೆರಿಗೆ ನಂತರ ವಿಪರೀತ ರಕ್ತಸ್ರಾವ: ಲಾಯಿಲ ಗಾಂಧಿ ನಗರದ ಮಹಿಳೆ ಸಾವು

Suddi Udaya
error: Content is protected !!