ಗುರುವಾಯನಕೆರೆ:ಅಂತಾರಾಷ್ಟ್ರೀಯ ಮಟ್ಟದಲ್ಲಿ
ವಿದ್ಯಾರ್ಥಿಗಳ ವೈಜ್ಞಾನಿಕ ಜ್ಞಾನ ,ಆಂಗ್ಲ ಭಾಷಾ ಜ್ಞಾನ, ಗಣಿತ ಪ್ರಾವೀಣ್ಯತೆ ಹಾಗೂ ಕೌಶಲ್ಯವನ್ನು ಒರೆಗೆ ಹಚ್ಚುವ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಒಲಿಂಪಿಯಾಡ್ ವಿಜ್ಞಾನ ಪರೀಕ್ಷೆಯಲ್ಲಿ ಮಾನ್ಯ ಡಿ ಎನ್, ವಿಧಾತ್ರಿ ಎನ್ ಜೆ ಹಾಗೂ ತುಷಾರ್ ದೇವ್ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ. ಗಣಿತ ಪರೀಕ್ಷೆಯಲ್ಲಿ ಸುಧನ್ವ ವೈ ಕೆ, ಧ್ರುವ ಅನೂಪ್ ಭಾಂಡೇಕರ್ ಆಯ್ಕೆಯಾದರೆ, ಇಂಗ್ಲೀಷ್ ಪರೀಕ್ಷೆಯಲ್ಲಿ ಶುಚಿಕಾ ಎನ್ ವಿ ಹಾಗೂ ವಿವೇಕ್ ಬೆನಲ್ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಎಕ್ಸೆಲ್ ಕಾಲೇಜಿನ ಒಟ್ಟು 133 ವಿದ್ಯಾರ್ಥಿಗಳು ಒಲಿಂಪಿಯಾಡ್ ಚಿನ್ನದ ಪದಕ ವಿಜೇತರಾಗಿದ್ದಾರೆ.
ಸಾಧಕರನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ , ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಸಂಯೋಜಕರು ಅಭಿನಂದಿಸಿದ್ದಾರೆ.