ಪುತ್ತೂರು: ಅತ್ಯಂತ ಕ್ರೀಯಾಶೀಲ ಅಧಿಕಾರಿಯಾಗಿದ್ದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಅವರಿಗೆ ಇದೀಗ ದಿಢೀರ್ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ.
ಜನಸ್ನೇಹಿ ಅಧಿಕಾರಿಯಾಗಿದ್ದ ಜುಬಿನ್ ಮೊಹಾಪಾತ್ರ ಅವರು ಪುತ್ತೂರು ಉಪವಿಭಾಗದ ಸುಳ್ಯ, ಬೆಳ್ತಂಗಡಿ, ಕಡಬ ವ್ಯಾಪ್ತಿಯಲ್ಲಿ ತಾವು ಬಂದ ಕೆಲವೇ ಸಮಯದಲ್ಲಿ ಜನಾನುರಾಗಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು.
ಐಎಎಸ್ ಹಾಗೂ ಐಪಿಎಸ್ ಎರಡೂ ವಿಭಾಗದಲ್ಲಿ ಕೆಲಸ ಮಾಡಿದ್ದ ಅವರು ಓರ್ವ ಸಾಮಾಜಿಕ ನ್ಯಾಯ ಪರ ಅಧಿಕಾರಿಯಾಗಿದ್ದರು. ಇಂತಹ ಅಧಿಕಾರಿಯ ದಿಢೀರ್ ವರ್ಗಾವಣೆಯ ಹಿಂದೆ ಕಾಣದ ಕೈಗಳ ಕೈವಾಡ ಎನ್ನಲಾಗುತ್ತಿದೆ. ಎಸಿಯವರನ್ನು ಧಾರವಾಡದ ಸಿಟಿ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.