April 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಚ್ಚಿನ: ಬಂಗೇರಕಟ್ಟೆಯಲ್ಲಿ ರಸ್ತೆ ದುರಸ್ಥಿಗೆ ಆಗ್ರಹಿಸಿ ಎಸ್.ಡಿ.ಪಿ.ಐ ವತಿಯಿಂದ ಪ್ರತಿಭಟನೆ

ಬೆಳ್ತಂಗಡಿ : ಮಚ್ಚಿನ ಗ್ರಾಮ ವ್ಯಾಪ್ತಿಯ ಬಂಗೇರಕಟ್ಟೆ- ಅಮ್ಡಾಲ್ ನೆತ್ತರವರೆಗಿನ ರಸ್ತೆ ದುರಸ್ಥಿಗೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಚ್ಚಿನ ಗ್ರಾಮ ಸಮಿತಿ ಅಧ್ಯಕ್ಷ ಹನೀಫ್ ಬಳ್ಳಮಂಜ ನೇತೃತ್ವದಲ್ಲಿ ಜ.24 ರಂದು ಪ್ರತಿಭಟನೆಯನ್ನು ನಡೆಸಲಾಯಿತು.

ಪ್ರತಿಭಟನಾಕರರನ್ನು ಉದ್ದೇಶಿಸಿ ಕ್ಷೇತ್ರ ಸಮಿತಿ ಸದಸ್ಯರಾದ ಅಬ್ದುಲ್ ರೌಫ್, ಸ್ಥಳೀಯರು ರಸ್ತೆ ದುರಸ್ಥಿಗೆ ಆಗ್ರಹಿಸಿ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಗಳು ಆಗಿಲ್ಲ, ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚರಗೊಂಡು ಒಂದು ತಿಂಗಳೊಳಗೆ ರಸ್ತೆಗೆ ಡಾಂಬರು ಹಾಕಬೇಕು, ಒಂದು ತಿಂಗಳೊಳಗೆ ಕೆಲಸ ಆರಂಭವಾಗದಿದ್ದರೆ ಗ್ರಾಮದ ಎಲ್ಲಾ ನಾಗರೀಕನ್ನು ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರನ್ನು ಸೇರಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಚ್ಚರಿಕೆ ನೀಡಿದರು.

ಬಂಗೇರಕಟ್ಟೆಯಿಂದ ಅಂಡಾಲ್- ನೆತ್ತರವರೆಗಿನ ರಸ್ತೆಯು ಹಲವಾರು ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟು ಜನರು ಓಡಾಡಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದ್ದು, ಅದನ್ನು ಆದಷ್ಟು ಬೇಗ ದುರಸ್ಥಿಗೊಳಿಸಬೇಕೆಂದು ಕಣಿಯೂರು ಬ್ಲಾಕ್ ಕಾರ್ಯದರ್ಶಿಗಳಾದ ಹನೀಫ್ ಟಿ. ಎಸ್ ಆಗ್ರಹಿಸಿದರು.

ಮಚ್ಚಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ರಸ್ತೆ ದುರಸ್ಥಿಗೆ ಆಗ್ರಹಿಸಿ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಕಣಿಯೂರು ಬ್ಲಾಕ್ ಅಧ್ಯಕ್ಷರಾದ ಮುಸ್ತಾಫ ಬಂಗೇರಕಟ್ಟೆ, ರಝಕ್ ಬಿ.ಎಂ, ಖಾಸಿಂ ಬಳ್ಳಮಂಜ, ಪಾರೆಂಕಿ ಬ್ರಾಂಚ್ ಅಧ್ಯಕ್ಷರಾದ ಶಾಫಿ ಸಾಲುಮರ, ವಝೀರ್ ಸಾಲುಮರ, ದಾವೂದ್ ಬಳ್ಳಮಂಜ, ಬ್ರಾಂಚ್ ಪದಾಧಿಕಾರಿಗಳು, ಕಾರ್ಯಕರ್ತರು, ನಾಗರೀಕರು ಪಾಲ್ಗೊಂಡಿದ್ದರು.

Related posts

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ವಿ. ದೇವಸ್ಯ, ಉಪಾಧ್ಯಕ್ಷರಾಗಿ ಸುನಿಲ್ ದೊಂಡೋಲೆ ಅವಿರೋಧ ಆಯ್ಕೆ

Suddi Udaya

ಬೆಳ್ತಂಗಡಿ: ಅಯೋಧ್ಯೆ ಬಾಲರಾಮ ಮೂರ್ತಿ ಕೆತ್ತನೆ ಕೆಲಸದಲ್ಲಿ ಭಾಗಿಯಾದ ಶಿಲ್ಪಿ ಜಯಚಂದ್ರ ನಾಳ

Suddi Udaya

ಬೆಳ್ತಂಗಡಿ ಔಷಧಿ ವ್ಯಾಪಾರಸ್ಥರ ಸಂಘದ ಜಂಟಿ ಸಭೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ: ಕಾಮಧೇನು ಎಂಟರ್ ಪ್ರೈಸಸ್ ಶುಭಾರಂಭ

Suddi Udaya

ಮೇ 22: ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೃಢಕಲಶ

Suddi Udaya
error: Content is protected !!