24.4 C
ಪುತ್ತೂರು, ಬೆಳ್ತಂಗಡಿ
April 19, 2025
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಸಂಘ-ಸಂಸ್ಥೆಗಳು

ಉಜಿರೆ ಹಳೆಪೇಟೆ ಶಾಲೆಯಲ್ಲಿ ಎಸ್‌ಡಿಎಂ ಆಸ್ಪತ್ರೆ ವತಿಯಿಂದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ

ಉಜಿರೆ: ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆಪೇಟೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಟಿನಿ ಇವರ ಸಹಯೋಗದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಹಳೆಪೇಟೆಯ ಶಾಲೆಯಲ್ಲಿ ಜ.26ರಂದು ನಡೆಯಿತು.

ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಹಾಗೂ ಬದುಕು ಕಟ್ಟೋಣ ಬನ್ನಿ ಸಂಚಾಲಕ ಕೆ. ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಸ್‌ಡಿಎಂ ಆಸ್ಪತ್ರೆ ಈ ಭಾಗದಲ್ಲಿ ಉತ್ತಮ ರೀತಿಯಲ್ಲಿ ಜನರ ಸೇವೆ ಮಾಡುತ್ತಿದೆ. ಖಾವಂದರು ಜನವರಿ ೧ ರಿಂದ ಉಚಿತ ಡಯಾಲಿಸಿಸ್ ಘೋಷಣೆ ಮಾಡಿದ್ದಾರೆ. ಎಸ್.ಡಿ.ಎಂ ಆಸ್ಪತ್ರೆಯಿಂದ ಮಾತ್ರ ಇಂತಹ ಸೇವೆ ಮಾಡಲು ಸಾಧ್ಯ ಎಂದು ಹೇಳಿದರು. ಜನಾರ್ಧನ್ ಅವರು ಎಸ್‌ಡಿಎಂ ಆಸ್ಪತ್ರೆಯ ಮುಖ್ಯಸ್ಥರಾಗಿ ಬಂದ ಮೇಲೆ ಆಸ್ಪತ್ರೆಯಲ್ಲಿ ಅನೇಕ ಬದಲಾವಣೆ ಆಗಿದೆ. ಉತ್ತಮ ಸೇವೆ ಕೂಡ ನೀಡುತ್ತಿದ್ದಾರೆ ಅಂದರು. ಈಗೀನ ಕಾಲದಲ್ಲಿ ಆರೋಗ್ಯ ಏನಾಗುತ್ತೆ ಅನ್ನೋದು ಗೊತ್ತಾಗಲ್ಲ, ಹೀಗಾಗಿ ಆರೋಗ್ಯ ತಪಾಸಣೆ ಅತೀ ಮುಖ್ಯ, ಹಳ್ಳಿ ಹಳ್ಳಿಗಳಿಗೆ ತೆರಳಿ ಎಸ್.ಡಿ.ಎಂ ಆಸ್ಪತ್ರೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿದೆ, ಇದೊಂದು ಉತ್ತಮ ಕಾರ್ಯ ಎಂದರು.

ಬೆಳ್ತಂಗಡಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ ಮಾತನಾಡಿ ಮಂಗಳೂರಿನ ಯಾವುದೇ ಆಸ್ಪತ್ರೆಗೆ ಹೋಲಿಕೆ ಮಾಡಿದರೆ ಇಲ್ಲಿನ ಎಲ್ಲಾ ಸೇವೆಗಳಿಗೆ ದುಡ್ಡು ಕಡಿಮೆ, ನನ್ನ ಸಂಬಂಧಿಕರ ಶಸ್ತ್ರ ಚಿಕಿತ್ಸೆ ಮಂಗಳೂರಿಗೆ ಹೋಲಿಸಿದರೆ ಅರ್ಧಕರ್ಧ ಕಡಿಮೆ ಬೆಲೆಗೆ ಆಗಿದೆ ಎಂದರು. ಜನಾರ್ದನ್ ಅವರು ಅಧಿಕಾರ ಪಡೆದುಕೊಂಡ ಬಳಿಕ ಆಸ್ಪತ್ರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚಿಗೆ ನಾನು ಒಂದು ರೋಗಿಯನ್ನು ರಾತ್ರಿ 10 ಗಂಟೆಗೆ ಕರೆದುಕೊಂಡು ಹೋಗಿದ್ದೆ, ಆಗ ಅಲ್ಲಿನ ಸಿಬ್ಬಂದಿ ಪ್ರೀತಿಯಿಂದಲೇ ನಮ್ಮನ್ನು ಸ್ವಾಗತಿಸಿದರು, ತಕ್ಷಣ ಪ್ರತಿಕ್ರಿಯೆ ನೀಡಿದರು. ಇದು ಶ್ಲಾಘನೀಯ ಎಂದರು. ಅನೇಕ ಆಸ್ಪತ್ರೆಗಳು ದುಡ್ಡಿನ ಮುಖ ನೋಡುತ್ತವೆ ಆದರೆ ಎಸ್.ಡಿ.ಎಂ ಆಸ್ಪತ್ರೆ ಸೇವೆಯ ಜನಮನ್ನಣೆಗೆ ಪಾತ್ರವಾಗಿದೆ ಎಂದರು.

ಎಸ್.ಡಿ.ಎಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ| ಎಂ. ಜನಾರ್ದನ್ ಮಾತನಾಡಿ ಸಾಮಾನ್ಯವಾಗಿ ಏನಾದರೂ ಕೆಲಸ ಮಾಡುವಾಗ ಲಾಭದ ಉದ್ದೇಶದಿಂದ ಮಾಡುತ್ತಾರೆ ಆದರೆ ಖಾವಂದರು ಹಾಗಲ್ಲ, ಸೇವಾ ಮನೋಭಾವ ಇಟ್ಟುಕೊಂಡು ಈ ಆಸ್ಪತ್ರೆ ಸ್ಥಾಪಿಸಿ ಈಗ ಸೇವೆ ಮಾಡುತ್ತಿದ್ದಾರೆ. ಬಡವರಿಗೆ ಏನಾದರೂ ಲಾಭ ಆಗಬೇಕು ಅನ್ನುವ ದೃಷ್ಟಿಯಿಂದ ಮಾಡುತ್ತಾರೆ. ಉಚಿತ ಡಯಾಲಿಸಿಸ್ ನೀಡುವ ಮೂಲಕ ದೊಡ್ಡ ಸೇವೆಯನ್ನು ರೋಗಿಗಳಿಗೆ ನೀಡಿದ್ದಾರೆ, ಇಂತಹ ಸೇವೆ ಖಂಡಿತಾ ಖಾವಂದರಿಂದ ಮಾತ್ರ ಸಾಧ್ಯ ಎಂದರು. ನಮ್ಮ ಎಲ್ಲ ಸಿಬ್ಬಂದಿಗಳು ಒಳ್ಳೆ ಕೆಲಸ ಮಾಡುತ್ತಿದ್ದಾರೆ ನಿಮ್ಮ ಸೇವೆಗೆ ಸದಾ ಸಿದ್ದರಿರುತ್ತಾರೆ ಎಂದರು. ಇವತ್ತಿನ ಉಚಿತ ತಪಾಸಣಾ ಶಿಬಿರಕ್ಕೆ ನಮ್ಮ ಆಸ್ಪತ್ರೆಯ ಎಲ್ಲ ಪ್ರಮುಖ ವೈದ್ಯರುಗಳು ಬಂದಿದ್ದಾರೆ ಇಲ್ಲಿಗೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಹಳೆಪೇಟೆ ಶಾಲೆ ಮುಖ್ಯೋಪಾಧ್ಯಾಯಿನಿ ಸಾವಿತ್ರಿ, ಹಳೆಪೇಟೆ ಜುಮ್ಮ ಮಸೀದಿ ಜೊತೆ ಕಾರ್ಯದರ್ಶಿ ಯು.ಕೆ. ಹನೀಫ್, ಕುಂಟಿನಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಇರ್ಫಾನ್, ಹಳೆಪೇಟೆ ಶಾಲೆ ಎಸ್‌ಡಿಎಂಸಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಅಬ್ದುಲ್ ಖಾದರ್, ಅಲ್-ಅಮೀನ್ ಯಂಗ್‌ಮೆನ್ಸ್ ಹಳೆಪೇಟೆ ಇದರ ಕಾರ್ಯದರ್ಶಿ ಫಝಲ್ ರಹ್‌ಮಾನ್, ಲಾಲ ಗ್ರಾ.ಪಂ. ಸದಸ್ಯರಾದ ಸಲೀಂ ಮತ್ತು ರೇವತಿ ಮತ್ತಿತರು ಉಪಸ್ಥಿತರಿದ್ದರು

Related posts

ಬೆಳ್ತಂಗಡಿ ಗ್ರಾಹಕರಿಗೆ ಸುವರ್ಣಾವಕಾಶ, ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ

Suddi Udaya

ಇಂದಬೆಟ್ಟು: ಸಿಡಿಲು ಬಡಿದು ಮಹಿಳೆ ಅಸ್ವಸ್ಥ

Suddi Udaya

ಕೊಲ್ಲೂರಿನಿಂದ-ನಾಡಿನ ಪ್ರಸಿದ್ದ ಶ್ರದ್ದಾಕೇಂದ್ರ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣಾ ಯಾತ್ರೆ: ಉಜಿರೆಯಲ್ಲಿ ಧರ್ಮ ಸಂರಕ್ಷಣಾ ರಥಯಾತ್ರೆಗೆ ಅದ್ದೂರಿ ಚಾಲನೆ,

Suddi Udaya

ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ವಾರ್ಷಿಕೋತ್ಸವ

Suddi Udaya

ಆರಂಬೋಡಿ : ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

Suddi Udaya

ಬೆಳಾಲು ಎಸ್.ಡಿ.ಎಮ್. ಅನುದಾನಿತ ಪ್ರೌಢಶಾಲೆಯಲ್ಲಿ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ

Suddi Udaya
error: Content is protected !!