23.6 C
ಪುತ್ತೂರು, ಬೆಳ್ತಂಗಡಿ
April 16, 2025
ಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿರಾಜ್ಯ ಸುದ್ದಿವರದಿ

ಬಿಗ್‌ಬಾಸ್ ಕನ್ನಡ ಸೀಸನ್ 11 ರ ಟ್ರೋಫಿ ಮುಡಿಗೇರಿಸಿಕೊಂಡ ಹಾವೇರಿಯ ಹಳ್ಳಿ ಹೈದ ಹನುಮಂತು

ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಯಾರು ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹಳ್ಳಿ ಹೈದ ಹಾವೇರಿಯ ಕುವರ ಹನುಮಂತು ಬಿಗ್‌ಬಾಸ್ ಸೀಸನ್ 11ರ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ತ್ರಿವಿಕ್ರಮ್ ಮತ್ತು ರಜತ್ ಅವರನ್ನು ಹಿಂದಿಕ್ಕೆ ಹಳ್ಳಿ ಹೈದ ಕಪ್ ಗೆ ಮುತ್ತಿಟ್ಟಿದ್ದಾರೆ. ಹನುಮಂತು ಕಪ್ ಜೊತೆಗೆ 50 ಲಕ್ಷ ರೂ ನಗದು ಬಹುಮಾನ ಕೂಡ ಗೆದ್ದಿದ್ದಾರೆ. ಇನ್ನು ತ್ರಿವಿಕ್ರಮ್ ಅವರು ಫಸ್ಟ್ ರನ್ನರ್ ಅಪ್ ಆಗಿ ಒಟ್ಟು 15 ಲಕ್ಷ ರೂ ನಗದು ಬಹುಮಾನ ಗೆದ್ದಿದ್ದಾರೆ.

ಹನುಮಂತ ಅವರಿಗೆ 5 ಕೋಟಿ 23 ಲಕ್ಷಕ್ಕೂ ಅಧಿಕ ವೋಟ್ ಬಂದಿತ್ತು. ರನ್ನರ್ ಅಪ್ ತ್ರಿವಿಕ್ರಮ್ ಗೆ 2 ಕೋಟಿ ಗೂ ಅಧಿಕ ವೋಟ್ ಬಂದಿತ್ತು. ಇದು ಸೀಸನ್ 10ರಲ್ಲಿ ಸ್ಪರ್ಧಿಗಳಿಗೆ ಸಿಕ್ಕ ವೋಟಿಂಗ್‌ಗಿಂತ ಎರಡು ಪಟ್ಟು ಹೆಚ್ಚು. ರಜತ್ ಕಿಶನ್ ಅವರು ಎರಡನೇ ರನ್ನರ್ ಅಪ್ ಆದರು. ಜೊತೆಗೆ 10 ಲಕ್ಷ ರೂ ನಗದು ಬಹುಮಾನ ಗೆದ್ದಿದ್ದಾರೆ.

Related posts

ಬೆಳ್ತಂಗಡಿ ತಾಲೂಕು ಔಷಧಿ ‌ವ್ಯಾಪಾರಸ್ಥರ ಸಂಘ: ಜಾಗತಿಕ ಔಷಧಿ ತಜ್ಞರ ದಿನದ ಆಚರಣೆ

Suddi Udaya

ರಾಷ್ಟ್ರಮಟ್ಟದ ಹಿರಿಯರ ಟೆನ್ನಿಸ್ ವಾಲಿಬಾಲ್ ಪಂದ್ಯಾಟ: ಶ್ರೀ ಧ.ಮಂ. ಕ್ರೀಡಾ ಸಂಘದ ವಿದ್ಯಾರ್ಥಿಗಳು ತೃತೀಯ ಸ್ಥಾನ

Suddi Udaya

ಉಜಿರೆ: ಮಹಾಮಳೆಗೆ ಎಸ್.ಡಿ.ಎಂ ಆಸ್ಪತ್ರೆಯ ಸಮೀಪ ಕಂಪೌಂಡ್ ಕುಸಿತ: ಸ್ಕೂಟಿ, ಬೈಕ್ ಜಖಂ: ಬೀಳುವ ಹಂತದಲ್ಲಿದೆ ವಾಸದ ಮನೆ

Suddi Udaya

ಮೇಲಂತಬೆಟ್ಟು: ಶಾಂತಿನಗರ ನಿವಾಸಿ ಐಸಾಕ್ ಡಿಸೋಜಾ ನಿಧನ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ

Suddi Udaya

ಶಾಲಾ ಮಕ್ಕಳ ರಕ್ಷಣೆಗೆ ಬೇಕಿದೆ ಮಚ್ಚಿನಕ್ಕೊಂದು ಬ್ಯಾರಿಕೇಡ್

Suddi Udaya
error: Content is protected !!