April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆ

ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಗೆ 11 ಸ್ಥಾನ, ಕಾಂಗ್ರೆಸ್ ಬೆಂಬಲಿತ 1 ಸ್ಥಾನ

ಕಲ್ಲೇರಿ : ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಯ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ 27 ಮಂದಿ ಅಭ್ಯರ್ಥಿಗಳು ಕಣದಲ್ಲಿದು ಚುನಾವಣೆಯು ಜ.27ರಂದು ಸಂಘದ ಕಚೇರಿ ಆವರಣದಲ್ಲಿ ನಡೆಯಿತು.

ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಅಭ್ಯರ್ಥಿಗಳಾದ ಸಾಲಗಾರ ಸಾಮಾನ್ಯ ಕ್ಷೇತ್ರದಲ್ಲಿ ಮಾಜಿ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಮೈರ, ಸಾಮ್ರಾಟ್ ಕಲ್ಲೇರಿ, ಸುನಿಲ್ ಅಣವು, ಜಯಾನಂದ ಕಲ್ಲಾಪು, ಸಾಲಗಾರ ಮಹಿಳಾ ಕ್ಷೇತ್ರದಿಂದ ಜಯಂತಿ ಪಾಲೇದು ಸರೋಜಿನಿ ವಿಜಯ ಕುಮಾರ್ ಕಲ್ಲಳಿಕೆ, ಸಾಲಗಾರರ ಹಿಂದುಳಿದ ವರ್ಗ ಎ ಸ್ಥಾನದಿಂದ ರಜನಿನಾಥ್ ಮುಂದಿಲ, ಸಾಲಗಾರರ ಹಿಂದುಳಿದ ವರ್ಗ ಬಿ ಸ್ಥಾನದಿಂದ ಕೃಷ್ಣಪ್ಪ ಗೌಡ, ಪ. ಜಾತಿ ಕ್ಷೇತ್ರದಿಂದ ಸುರೇಶ್ ಎಚ್ ಎಲ್., ಪ.ಪಂಗಡ ಕ್ಷೇತ್ರದಿಂದ ಶ್ರೀನಿವಾಸ್ ಜಯ ಗಳಿಸಿದ್ದಾರೆ.

ಸಾಲಗಾರರ ಕೇತ್ರದಿಂದ ಪ್ರಭಾಕರ ಗೌಡ ಪೋಸೋಂದೊಡಿ ಮತ್ತು ರೋಹಿತ್ ಕುಪ್ಪೆಟಿ 512 ಮತಗಳನ್ನು ಪಡೆದು ಟೈಯಾಗಿದ್ದು, ಚುನಾವಣಾಧಿಕಾರಿ ಯವರ ತೀರ್ಮಾನದ ಮೇರೆಗೆ ಮೊದಲ ಎರಡುವರೆ ವರ್ಷಗಳ ಅವಧಿಗೆ ರೋಹಿತ್ ಕುಪ್ಪೆಟ್ಟಿ, ನಂತರದ ಎರಡುವರೆ ವರ್ಷಗಳ ಅವಧಿಗೆ ಪ್ರಭಾಕರ ಗೌಡ ಪೋಸೋಂದೊಡಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಸಾಮಾನ್ಯ ಕ್ಷೇತ್ರದಿಂದ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಾಜಿ ನಿರ್ದೇಶಕರಾದ ಜಯ ವಿಕ್ರಂ ಕಲ್ಲಾಪು ಜಯ ಗಳಿಸಿದ್ದಾರೆ.

Related posts

ಮುಂಡಾಜೆ: ಸೈಂಟ್ ಮೇರಿಸ್ ಚರ್ಚ್ ನಲ್ಲಿ ಗುಡ್ ಫ್ರೈಡೆ ಆಚರಣೆ

Suddi Udaya

ಮಾಲಾಡಿ ಗ್ರಾ.ಪಂ. ಗ್ರಾಮ ಸಭೆ

Suddi Udaya

ನ್ಯಾಯ್ಯತರ್ಪು: ಮನೆಗಳಿಗೆ ಸಿಡಿಲು ಬಡಿದು ಹಾನಿ: ಸ್ಥಳಕ್ಕೆ ರಕ್ಷಿತ್ ಶಿವರಾಂ ಭೇಟಿ

Suddi Udaya

ಮುಂಡಾಜೆ: ಕೃಷಿಕ ಸದಾಶಿವ ನೇಕಾರ ನಿಧನ

Suddi Udaya

ಮಹಿಳಾ ಕಾಂಗ್ರೆಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಝೀನತ್ ಉಜಿರೆ ನೇಮಕ

Suddi Udaya

ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದಿಂದ ಹೊಗೆ ಮನೆಗೆ ಬೆಂಕಿ‌ ಬಿದ್ದು ನಷ್ಟ ಅನುಭವಿಸಿದ ಕಿನ್ನಿ ಗೌಡರಿಗೆ ಪರಿಹಾರ ನಿಧಿ ಹಸ್ತಾಂತರ

Suddi Udaya
error: Content is protected !!