28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಲವಂತಿಗೆ ಗ್ರಾಮ ಪಂಚಾಯತ್ ಗ್ರಾಮ ಸಭೆ

ಮಲವಂತಿಗೆ : ಇಲ್ಲಿಯ ಗ್ರಾಮ ಪಂಚಾಯತದ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.02 ರಂದು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಅ.ಖಾ.ಹಿ. ಪ್ರಾ. ಶಾಲಾ ವಠಾರದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಮುಖ್ಯ ಪಶು ವೈದ್ಯಾಧಿಕಾರಿ ಮಂಜ ನಾಯ್ಕ ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು.

ಎಳನೀರು ಗುತ್ಯಡ್ಕ ಶಾಲೆಗೆ ಶಿಕ್ಷಕರ ಕೊರತೆ ಇರುವುದರ ಬಗ್ಗೆ ಮಲವಂತಿಗೆ ಗ್ರಾ. ಪಂ ಅಧ್ಯಕ್ಷ ಪ್ರಕಾಶ್ ರವರು ಶಿಕ್ಷಣ ಇಲಾಖಾ ಅಧಿಕಾರಗಳ ಜೊತೆ ಚರ್ಚಿಸಿ ಈ ಶಾಲೆಗಳಲ್ಲಿ ಅನೇಕ ಜನ ಮಕ್ಕಳಿದ್ದು ಅವರಿಗೆ ಭೋದಿಸುವಂತಹ ಶಿಕ್ಷಕರು ಇಲ್ಲ, ಮಕ್ಕಳ ಭವಿಷ್ಯ ಅಗತ್ಯ, ಶಾಲೆ ಮುಚ್ಚುವುದಕ್ಕೆ ಶಿಕ್ಷಣ ಇಲಾಖೆಗಳೇ ಕಾರಣ. ಯಾವುದೇ ಮಕ್ಕಳಾದರೂ ಅವರಿಗೆ ಉತ್ತಮ ರೀತಿಯ ಶಿಕ್ಷಣ ಸಿಗಬೇಕು ಆದಷ್ಟು ಬೇಗ ಈ ಶಾಲೆಗಳಿಗೆ ಶಿಕ್ಷಕರ ನೇಮಾಕಾತಿ ಮಾಡಿಸುವುದಕ್ಕೆ ಆಗ್ರಾಹ ಮಾಡಿದರು. ಹಾಗೂ ಸಭೆಯ ನಡುವೆ ತೆರಳುವಂತಹ ಅಧಿಕಾರಗಳ ವಿರುದ್ಧ ಗರಂ ಆದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ರೋಹಿಣಿ, ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಶ್ಮಿ ಬಿ ಸ್ವಾಗತಿಸಿ, ನಿರ್ವಹಿಸಿದರು ಹಾಗೂ ಕಳೆದ ಗ್ರಾಮ ಸಭೆಯ ನಡವಳಿಗಳ ಬಗ್ಗೆ ಅನುಪಾಲನ ವರದಿ ವಾಚಿಸಿದರು.

ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Related posts

ಅಶೋಕ್ ಜೈನ್ ರವರಿಗೆ ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ ಸನ್ಮಾನ

Suddi Udaya

ಮೇಲಂತಬೆಟ್ಟುವಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ; ಗ್ರಾಮೀಣ ಸ್ಪರ್ಧೆಗಳ ಆಯೋಜನೆ

Suddi Udaya

ಮರೋಡಿ: 9ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ನ್ಯಾಯತರ್ಪು: ಪಲ್ಲಾದೆ ಕೆರೆಯಲ್ಲಿ ಶವ ಪತ್ತೆ

Suddi Udaya

ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ: ಸಾನಿಧ್ಯ ಕಲಶಾಭಿಷೇಕ, ಉತ್ಸವಬಲಿ

Suddi Udaya
error: Content is protected !!