ಧರ್ಮಸ್ಥಳ ಘಟಕದಲ್ಲಿ ಇಂಧನ ಮಾಸಿಕ ಆಚರಣೆ, ರಾಷ್ಟ್ರೀಯ ರಸ್ತೆ ಸುರಕ್ಷತಾ ಆಚರಣೆ ಹಾಗೂ ಚಾಲಕರ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಧರ್ಮಸ್ಥಳದ ಠಾಣಾಧಿಕಾರಿ ಕಿಶೋರ್ ಕಾರ್ಯಕ್ರಮ ಉದ್ಘಾಟಿಸಿದರು.
ವಿಭಾಗೀಯ ಯಾಂತ್ರಿಕ ಅಭಿಯಂತರರು ಹಾಗೂ ಧರ್ಮಸ್ಥಳ ಘಟಕದ ಘಟಕ ವ್ಯವಸ್ಥಾಪಕರು ಭಾಗವಹಿಸಿದ್ದರು. ಘಟಕದ ಎಲ್ಲಾ ಚಾಲಕ, ನಿರ್ವಾಹಕರನ್ನು ಪುಷ್ಪವನ್ನು ನೀಡುವುದರ ಮೂಲಕ ಅಭಿನಂದಿಸಲಾಯಿತು.
ಘಟಕ ವ್ಯವಸ್ಥಾಪಕ ಸುಂದರ ಎನ್. ಸ್ವಾಗತಿಸಿ ಪ್ರಾಸ್ತಾವಿಸಿದರು. ರೋಷನ್ ಪ್ರಶಾಂತ ವಾಲ್ಟರ್ ಕಾರ್ಯಕ್ರಮ ನಿರೂಪಸಿದರು. ಧರ್ಮಸ್ಥಳ ಘಟಕದ ಸಹಾಯಕ ಕಾರ್ಯಾಧ್ಯಕ್ಷ ಕಮಲ್‌ರಾಜ್ ವಂದಿಸಿದರು.