37.2 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿಯಲ್ಲಿ ಲೋಕೋಪಯೋಗಿ ಇಲಾಖೆಯವರು ಅಳವಡಿಸಿದ ನಾಮಫಲಕದಲ್ಲಿ ಗೊಂದಲ

ಬೆಳ್ತಂಗಡಿ: ಸ್ಥಳೀಯ ಸ್ಥಳಗಳ ಸರಿಯಾದ ಮಾಹಿತಿ ಇಲ್ಲದಿದ್ದರೆ ಏನೆಲ್ಲಾ ಯಡವಟ್ಟುಗಳು ಆಗುತ್ತವೆ ಎಂಬುದಕ್ಕೆ ಲೋಕೋಪಯೋಗಿ ಇಲಾಖೆಯವರು ಅಳದಂಗಡಿಯಲ್ಲಿ ಹಾಕಿರುವ ನಾಮಫಲಕವೇ ಸಾಕ್ಷಿ.


ಇಲಾಖೆಯು ಗುರುವಾಯನಕೆರೆ- ನಾರಾವಿ- ಕಾರ್ಕಳ ರಾಜ್ಯಹೆದ್ದಾರಿಯಲ್ಲಿ ಅಲ್ಲಲ್ಲಿ ಊರುಗಳ ಹೆಸರಿರುವ ನಾಮಫಲಕಗಳನ್ನು ಅಳವಡಿಸಿದೆ. ಇವುಗಳಲ್ಲಿ ಅಳದಂಗಡಿಯಲ್ಲಿ ದೈವಸ್ಥಾನದ ಪಕ್ಕದಲ್ಲಿ ಹಾಕಿರುವ ಫಲಕದಲ್ಲಿ ದೈವದ ಹೆಸರು ಅಪಭ್ರಂಶಗೊಂಡಿದೆ. ಶ್ರೀಸತ್ಯದೇವತೆ ದೈವಸ್ಥಾನ ಅಳದಂಗಡಿ ಎಂದು ಬರೆಯುವ ಬದಲು ” ಸತ್ಯದೇವಾತ ದೇವಸ್ಥಾನ ಅಳದಂಗದಿ ” ಎಂದು ಬರೆಯಲಾಗಿದೆ. ಸತ್ಯದೇವತೆ ಇರುವಲ್ಲಿ ಸತ್ಯದೇವಾತ; ದೈವಸ್ಥಾನ ಇರಬೇಕಾದಲ್ಲಿ ದೇವಸ್ಥಾನ; ಅಳದಂಗಡಿಯ ಬದಲಾಗಿ ಅಳದಂಗದಿ ಆಗಿದೆ.


ಫಲಕ ಹೀಗೇಯೇ ಕೆಲಕಾಲ ಇದ್ದರೆ ಅದರಲ್ಲಿ ಇರುವ ಹೆಸರೇ ಚಾಲ್ತಿಯಲ್ಲಿ ಬಂದರೆ ಅಚ್ಚರಿಯಿಲ್ಲ. ಇನ್ನಾದರೂ ಇಲಾಖೆಯವರು ಸರಿಯಾದ ಫಲಕ ಅಳವಡಿಸುವರೇ ಕಾದು ನೋಡಬೇಕಾಗಿದೆ.

Related posts

ವಿದ್ಯುತ್ ಪರಿವರ್ತಕದಿಂದ ಕಿಡಿಗಳು ಸಿಡಿದು ವ್ಯಾಪಿಸಿದ ಬೆಂಕಿ; ಅನಾಹುತ ತಪ್ಪಿಸಿದ ಸ್ಥಳೀಯ ನಾಗರಿಕರು

Suddi Udaya

ಡಿ.21 :ಕೊಡಿಂಬಾಡಿಯಲ್ಲಿ ಲಲಿತ ಮೆಡಿಕಲ್ ಸ್ಟೋರ್‍ಸ್ ಶುಭಾರಂಭ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

Suddi Udaya

ಬೆಳ್ತಂಗಡಿಯಲ್ಲಿ ವಿ.ಪ. ಶಾಸಕ ಹರೀಶ್ ಕುಮಾರ್ ರವರಿಂದ ಸರಕಾರದ “ಶಕ್ತಿ”ಯೋಜನೆಗೆ ಚಾಲನೆ

Suddi Udaya

ಬಳಂಜ ಬದಿನಡೆ ಕ್ಷೇತ್ರದಲ್ಲಿಪ್ರಶ್ನಾ ಚಿಂತನೆ

Suddi Udaya

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗರು ಶ್ರೀ ಬ್ರಹ್ಮಾನಂದ
ಸರಸ್ವತಿ ಸ್ವಾಮೀಜಿಯವರಿಂದ ಸುದ್ದಿ ಉದಯ ವಾರಪತ್ರಿಕೆ ಬಿಡುಗಡೆ

Suddi Udaya
error: Content is protected !!