April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಚ್ಚಿನ ಗ್ರಾಮದ ಪೇಟೆಯ ಶೌಚಾಲಯದ ಆದೋಗತಿ.. ಉಪಯೋಗಕ್ಕಿಲ್ಲದ ಕಟ್ಟಡ-ತುಕ್ಕು ಹಿಡಿದ ಬಾಗಿಲು…

ಮಚ್ಚಿನ: ಮಚ್ಚಿನ ಗ್ರಾಮಕ್ಕೆ ಇಲ್ಲವೇ ಶೌಚಾಲಯದ ಭಾಗ್ಯ.. ಈ ಗ್ರಾಮದಲ್ಲಿ ದೇವಸ್ಥಾನ, ಶಾಲೆ, ಬ್ಯಾಂಕುಗಳು, ಆರೋಗ್ಯ ಕೇಂದ್ರ ಇತರೆ ಎಲ್ಲ ಮೂಲಭೂತ ಸೌಕರ್ಯ ಈ ಗ್ರಾಮದಲ್ಲಿ ಇದ್ದರೂ, ಜನರಿಗೆ ಸಾರ್ವಜನಿಕ ಶೌಚಾಲಯ, ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಮಾತ್ರ ಈ ಗ್ರಾಮದ ಜನರ ಪಾಲಿಗಿಲ್ಲದಂತಾಗಿದೆ.

ನಿರ್ಮಲ ಗ್ರಾಮ ಪುರಸ್ಕೃತಗೊಂಡ ಮಚ್ಚಿನ ಗ್ರಾಮದಲ್ಲಿ ಮನೆಗೊಂದು ಶೌಚಾಲಯ ಇದೆ. ಆದರೆ ಗ್ರಾಮಕ್ಕೊಂದು ಶೌಚಾಲಯ ಇದ್ದರೂ, ಇಲ್ಲದಂತಿರುವ ಸ್ಥಿತಿಯಾಗಿದೆ. ಮಚ್ಚಿನ ಹೃದಯ ಭಾಗದಲ್ಲಿ ಬಹುದೊಡ್ಡ ಶೌಚಾಲಯದ ಕಟ್ಟಡವಿದ್ದರೂ ಉಪಯೋಗಕ್ಕಿಲ್ಲದೆ ನಾರುತ್ತಿದೆ. ಗಿಡಗಂಟಿ ಪೊದೆಗಳಿಂದ ಮುತ್ತಿಹೋಗಿವೆ. ಸಾರಾಯಿ ಬಾಟಲಿಗಳ ರಾಶಿ, ರಾಶಿ ತಾಣವಾಗಿದೆ. ಬಾಗಿಲು ತುಕ್ಕು ಹಿಡಿದು ಹೋಗಿವೆ. ಸರಿಯಾದ ನೀರಿನ ವ್ಯವಸ್ಥೆಗಳೇ ಇಲ್ಲದಂತಾಗಿದೆ. ಪುರುಷರು ಶೌಚಾಲಯಕ್ಕೆ ಅಕ್ಕ ಪಕ್ಕ ಓಡಾಡಿದರೆ, ಮಹಿಳೆಯರು ಎಲ್ಲಿಗೆ ಹೋಗಲಿ ಸ್ವಾಮಿ.. ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಸಮಸ್ಯೆಯ ಬಗ್ಗೆ ಪತ್ರಿಕೆಯಲ್ಲಿ ಹಲವು ಬಾರಿ ಪ್ರಕಟಗೊಂಡರು ಎಚ್ಚೆತ್ತುಕೊಳ್ಳದೆ ಇರುವುದು ಸಾರ್ವಜನಿಕರಿಗೆ ನಿರಾಶೆಯಾಗಿದೆ. ಅಧಿಕಾರಿಗಳೆ, ಜನಪ್ರತಿನಿಧಿಗಳೇ, ಒಂದು ಸಾರಿ ಈ ಶೌಚಾಲಯ ಬಳಿ ಬಂದು ನೋಡಿ.. ಯಾಕೆ ನಿರ್ಲಕ್ಷ್ಯ… ಸಾರ್ವಜನಿಕರು, ಮಹಿಳೆಯರು, ಆಟೋ ಚಾಲಕರು, ಶೌಚಾಲಯಕ್ಕಾಗಿ ಪೇಟೆ ಬದಿಯಲ್ಲಿ ಇರುವ ಮನೆಗಳಿಗೆ ತೆರಳಿ ಬೇಡುವಂತ ಸ್ಥಿತಿ ನಿರ್ಮಾಣಗೊಂಡಿದೆ.

ಪೇಟೆಯಲ್ಲಿ ಹೆಸರಿಗೊಂದು ಶೌಚಾಲಯ ಕಟ್ಟಡ ಇದೆ ಆದರೆ ಜನರಿಗೆ ಉಪಯೋಗಕ್ಕಿಲ್ಲ, ಈ ಕಟ್ಟಡ ಇದ್ದರೇನು ಇಲ್ಲದಿದ್ದರೇನು ಎನ್ನುತ್ತಾರೆ ಜನರು. ಸಾರ್ವಜನಿಕರಿಗೆ ಕುಡಿಯಲು ನೀರು ಇಲ್ಲ ಹಲವಾರು ಜನರು ಓಡಾಡುವ ಮಚ್ಚಿನ ಪೇಟೆಯಲ್ಲಿ ಇನ್ನಾದರೂ ಒಂದು ಉತ್ತಮ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಈ ಗ್ರಾಮದ ಜನರು ಉಪಯೋಗಿಸುವಂತಾಗಲಿ ಶೌಚಾಲಯದ ನಿರ್ವಹಣೆಗೆ ಜನ ನೇಮಕಗೊಳಿಸಿ, ಜನರಿಗೆ ಒಂದು ಸುಂದರ ಶೌಚಾಲಯ ಮರುಬಳಕೆ ಮಾಡುವಂತೆ. ಕುಡಿಯುವ ನೀರಿನ ವ್ಯವಸ್ಥೆ ಈ ಎಲ್ಲ ಮೂಲಭೂತ ಸೌಕರ್ಯಗಳು ಸಿಗುವಂತಾಗಲಿ ಎನ್ನುತ್ತಾರೆ ಸಾರ್ವಜನಿಕರು.


ವರದಿ: ಹರ್ಷ ಬಳ್ಳಮಂಜ

Related posts

ಕುಂಟಾಲಪಳಿಕೆ ಅಂಗನವಾಡಿ ಕೇಂದ್ರದ 28ನೇ ವರ್ಷದ ಸಂಭ್ರಮ “ಮಕ್ಕಳ ಹಬ್ಬ

Suddi Udaya

ಬೆಳ್ತಂಗಡಿ ಆಭರಣ ಜ್ಯುವೆಲ್ಲರ್ಸ್ ಗೆ ಐಟಿ ದಾಳಿ

Suddi Udaya

ಇಂದಬೆಟ್ಟು: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರಿಂದ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಭೆ

Suddi Udaya

ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ಯೋಜನೆಯ ಸೇವಾ ಪ್ರತಿನಿಧಿ ಕೇಶವ ಅಚ್ಚಿನಡ್ಕರವರಿಗೆ ಆರ್ಥಿಕ ಧನಸಹಾಯ

Suddi Udaya

ಮಾ14-15 ಎಸ್.ಡಿ.ಎಂ ಝೇಂಕಾರ ಉತ್ಸವ: ಖ್ಯಾತ ನಟ ರಮೇಶ್ ಅರವಿಂದ್ ವಿಶೇಷ ಆಕರ್ಷಣೆ

Suddi Udaya

ನಾವೂರು ರಿಕ್ಷಾ ನಿಲ್ದಾಣ ಎದುರು ಅಳವಡಿಸಿದ ಇಂಟರ್ ಲಾಕ್ ಹಾಳಾಗದಂತೆ ಅಡ್ಡವಾಗಿ ಇಟ್ಟ ಅಡಿಕೆ ಮರ: ತೆರವುಗೊಳಿಸುವಂತೆ ಸಾರ್ವಜನಿಕರ ಒತ್ತಾಯ

Suddi Udaya
error: Content is protected !!