April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಕುಂಭಾಭಿಷೇಕ ಪೂರ್ವಭಾವಿಯಾಗಿ ಚಪ್ಪರ ಮೂಹೂರ್ತ

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಅರಮಲೆ ಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವವು ಫೆ.9ರಿಂದ ಫೆ.13ರವರೆಗೆ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಚಪ್ಪರ ಮೂಹೂರ್ತವು ದೈವಸ್ಥಾನದ ಅನುವಶಿಂಕ ಆಡಳಿತ ಮೊಕ್ತೇಸರಾದ ಸುಖೇಶ್ ಕುಮಾರ್ ಕಡಂಬು ಇವರ ನೇತೃತ್ವದಲ್ಲಿ ಜ.30ರಂದು ಜರುಗಿತು.


ದೈವಸ್ಥಾನದ ಪ್ರಧಾನ ಅರ್ಚಕರಾದ ರತ್ನಾಕರ ನೂರಿತ್ತಾಯ ಅವರು ಚಪ್ಪರ ಮೂಹೂರ್ತದ ಪೂಜಾ ವಿಧಿಗಳನ್ನು ನೆರವೇರಿಸಿದರು. ಈ ಹಿಂದೆ ಸುಮಾರು 45 ವರ್ಷಗಳ ಕಾಲ ನಿರಂತರವಾಗಿ ಅರೆಮಲೆಬೆಟ್ಟದ ಜಾತ್ರೋತ್ಸವದಲ್ಲಿ ಚಪ್ಪರದ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದು, ವೃದ್ಧ್ಯಾಪದಿಂದ ನಡೆಯಲು ಸಾಧ್ಯವಿಲ್ಲದಿದ್ದರೂ, ಉತ್ಸಾಹದಿಂದ ಬೆಟ್ಟಕ್ಕೆ ಆಗಮಿಸಿದ ಹಿರಿಯರಾದ ಕಾಂತಪ್ಪ ನಾಯ್ಕ ಮತ್ತು ಅವರ ಸಹೋದರ ನಾರಾಯಣ ನಾಯ್ಕ ಅವರು ದೈವಸ್ಥಾನದ ಕುಂಭಾಭೀಷೇಕದ ಈ ವಿಶೇಷ ಚಪ್ಪರ ಮೂಹೂರ್ತವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸುನೀಶ್ ಕುಮಾರ್ ಕಡಂಬು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ವಾತ್ಸಲ್ಯ, ಆನಂದ ಶೆಟ್ಟಿ ವಾತ್ಸಲ್ಯ, ಸನ್ಮತಿ ಜೈನ್, ವಿಠಲ ಆಚಾರ್ಯ, ಪ್ರಶಾಂತ ಸಾಲ್ಯಾನ್, ಚಂದ್ರಹಾಸದಾಸ್, ಚಪ್ಪರ ಸಮಿತಿಯ ಸಂಚಾಲಕ ಕೃಷ್ಣಯ್ಯ ಆಚಾರ್ಯ ಗದ್ದೆಮನೆ, ಸಹ ಸಂಚಾಲಕ ಕೇಶವ ಆಚಾರ್ಯ, ಐತಪ್ಪ ಮಡಿವಾಳ, ರವಿ ಸಫಲ್ಯ ಕೋಡಿ, ಸದಾಶಿವ ಶೆಟ್ಟಿ ಅಮರ್‌ಜಾಲ್, ಮಂಜುನಾಥ ಆಚಾರ್ಯ ಕನ್ನಡಿಕಟ್ಟೆ, ಲಕ್ಷ್ಮಣ ಆಚಾರ್ಯ ಮಾಯಿಂದೊಟ್ಟು, ಸದಾಶಿವ ಆಚಾರ್ಯ ಮುಂಡೂರು, ಚಂದ್ರಯ ಆಚಾರ್ಯ ಮುಂಡೂರು ಮೊದಲಾದವರು ಉಪಸ್ಥಿತರಿದ್ದರು.

Related posts

ನೆರಿಯ: ತಿಮ್ಮಯ್ಯ ಗೌಡ ಹೃದಯಾಘಾತದಿಂದ ನಿಧನ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಪ್ರದಾನ

Suddi Udaya

ಜಮಲಾಬಾದ್ ಇದ್ಗದಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ಬೆಳ್ತಂಗಡಿ: ನಾಟಿ ವೈದ್ಯ ಬಾಬು ಆಚಾರ್ಯ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ, ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಹಾಗೂ ಕೃಷಿ ಸಾಧನಾ ಸಲಕರಣೆ ವಿತರಣೆ

Suddi Udaya

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ – ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!