ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ವಿಜ್ಞಾನ ಸಂಘದ ವತಿಯಿಂದ ನಾಟಿ ಔಷಧಿಗಳ ಪ್ರಾತ್ಯಕ್ಷಿಕೆ ಮತ್ತು ವಿವರಣೆ ಕಾರ್ಯಕ್ರಮವು ಇಂದು(ಫೆ.1) ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಿತು.
ಪುದುವೆಟ್ಟು ಗ್ರಾಮದ ನಾಟಿ ವೈದ್ಯರಾದ ನಾರಾಯಣ ಗೌಡ ಮುಚ್ಚಾರು ಇವರು ನಾಟಿ ಔಷಧಿಯ ಬಗ್ಗೆ ಮಕ್ಕಳಿಗೆ ಸವಿವರವಾಗಿ ಕೆಲವು ಔಷಧೀಯ ಸಸ್ಯಗಳನ್ನು ತೋರಿಸುವುದರ ಮೂಲಕ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಕಮಲ್ ತೇಜು ರಜಪೂತ್ ವಹಿಸಿದ್ದರು. ಶ್ರೀಮತಿ ಕಾವ್ಯ ಎಸ್ ನಿರ್ವಹಿಸಿದ ಕಾರ್ಯಕ್ರಮಕ್ಕೆ ಶ್ರೀಮತಿ ಉಷಾ ಕುಮಾರಿ ಧನ್ಯವಾದವಿತ್ತರು.