ಬೆಳ್ತಂಗಡಿ: ವೇಣೂರು ಪ್ರೌಢ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು 1 ಲಕ್ಷ ರೂ.ಅನುದಾನ ಮಂಜೂರಾತಿ ನೀಡಿದ್ದಾರೆ.
ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿಗಳಾದ ದಯಾನಂದ, ವಲಯ ಮೇಲ್ವಿಚಾರಕಿ ಶಾಲಿನಿ, ತಾಲೂಕು ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಗಿರೀಶ್ ಕೆ ಎಸ್ ಇವರು ಶಾಲಾ ಸಮಿತಿಯವರಿಗೆ ವಿತರಿಸಿದರು.
ಉಪಪ್ರಾಂಶುಪಾಲರು ವೆಂಕಟೇಶ್ ಎಸ್. ತುಳುಪುಳೆ,ಎಸ್. ಡಿ . ಎಂ. ಸಿ ಅಧ್ಯಕ್ಷ ರಾಜೇಶ್ ಮೂಡುಕೋಡಿ, ನೆಲ್ಸನ್ ಹೆರಾಲ್ಡ್, ಶ್ರೀಮತಿ ಸುಕನ್ಯಾ ಪ್ರಭು, ಶ್ರೀಮತಿ ಜ್ಯೋತಿ ಜೂಲಿಯೆಟ್ ಡಿ’ಸೋಜ , ಶ್ರೀಮತಿ ಸಂಧ್ಯಾ ಜೈನ್, ಶ್ರೀಮತಿ ಸುಶೀಲಾ, ಶ್ರೀಮತಿ ಪ್ರೇಮಾ ಕೆ, ಶ್ರೀಮತಿ ಅನುಸೂಯ ಫಾಟಕ್, ಶ್ರೀಮತಿ ಸಂಧ್ಯಾ, ಲೋಕಯ್ಯ ಎಸ್, ಹಾಗೂ ಮಂಜುನಾಥ, ವೇಣೂರು ಎ ಮತ್ತು ಬಿ ಒಕ್ಕೂಟದ ಅಧ್ಯಕ್ಷ ಪದ್ಮಪ್ಪ ಹಾಗೂ ಸುಚಿತ್ರ ಹೆಗ್ಡೆ, ಉಪಾಧ್ಯಕ್ಷರು ಹರಿಪ್ರಸಾದ್, ಸೇವಾಪ್ರತಿನಿಧಿ ಜಯಂತಿ ಉಪಸ್ಥಿತರಿದ್ದರು.