25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಹಾಮಂಡಲೇಶ್ವರಾಗಿ ಪಟ್ಟಾಭಿಶಿಕ್ತರಾಗಿ ಆಗಮಿಸಿದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಉಜಿರೆಯಲ್ಲಿ ಭಕ್ತರಿಂದ ಭವ್ಯ ಸ್ವಾಗತ

ಬೆಳ್ತಂಗಡಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಉತ್ತರ ಭಾರತದ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಪದವಿಯಾದ 1008 ಮಹಾಮಂಡಲೇಶ್ವರಾಗಿ ಪಟ್ಟಾಭಿಶಿಕ್ತರಾಗಿ ಆಗಮಿಸಿದ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಫೆ.2 ರಂದು ಉಜಿರೆಯಲ್ಲಿ ಭವ್ಯವಾಗಿ ಸ್ವಾಗತ ಕೋರಲಾಯಿತು.

ಪ್ರಯಾಗ್‌ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಉತ್ತರ ಭಾರತದ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕವು ಜುನಾ ಅಖಾಡದ ಮೂಲಕ ನೆರವೇರಿತು. ಇದು ಕರ್ನಾಟಕಕ್ಕೆ ಸಿಕ್ಕಿರುವ ಮೊದಲ ಮಹಾಮಂಡಲೇಶ್ವರ ಪದವಿಯಾಗಿದೆ.ಕನ್ಯಾಡಿ ಶ್ರೀರಾಮಕ್ಷೇತ್ರಕ್ಕೆ ಆಗಮಿಸುವ ವೇಳೆ ಸಾರ್ವಜನಿಕರು ಭವ್ಯ ಸ್ವಾಗತ ಕೋರುವ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಾಚರಿಸಲಾಯಿತು. ಕನ್ಯಾಡಿ ಸ್ವಾಮೀಜಿಯವರು ಕುಂಭಮೇಳ ಹಾಗೂ ಮಹಾಮಂಡಲೇಶ್ವರ ಪದವಿ ಬಗ್ಗೆ ಮಾತನಾಡಿ ರಾಷ್ಟ್ರ ಹಿತವೇ ಪರಮ ಹಿತ,ಲೋಕ ಕಲ್ಯಾಣವೇ ಶ್ರೇಷ್ಠ ಕಾರ್ಯ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಶಾಸಕ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ‌.ಹರೀಶ್ ಕುಮಾ‌ರ್, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಾರಂತ್‌, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್‌, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿ.ಪಂ. ಮಾಜಿ ಸದಸ್ಯ ಶೈಲೇಶ್‌ ಕುಮಾರ್ ಕುರ್ತೋಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಮುಖರಾದ ಸೀತರಾಮ ಬೆಳಾಲು, ಸಂತೋಷ್‌ ಕುಮಾರ್ ಕಾಪಿನಡ್ಕ,ಕಿರಣ್ ಕುಮಾರ್ ಮಂಜಿಲ,ಸದಾನಂದ ಪೂಜಾರಿ ಉಂಗೀಲಬೈಲು,ರಾಜೇಶ್ ಮೂಡುಕೋಡಿ, ಅಭಿನಂದನ್ ಹರೀಶ್ ಕುಮಾರ್, ಎಸ್‌.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲು, ಕ್ಷೇತ್ರದ ಟ್ರಸ್ಟಿಗಳಾದ ತುಕಾರಾಮ್ ಸಾಲ್ಯಾನ್, ಕೃಷ್ಣಪ್ಪ ಗುಡಿಗಾರ್,ರವೀಂದ್ರ ಪೂಜಾರಿ ಆರ್ಲ,ಉಜಿರೆ ಮಹಿಳಾ ಸೊಸೈಟಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಪ್ರಕಾಶ್ ಚಾರ್ಮಾಡಿ,ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ ವೇಣೂರು, ಉದ್ಯಮಿ ಮೋಹನ್ ಶೆಟ್ಟಿಗಾ‌ರ್,ಚಿದಾನಂದ ಇಡ್ಯ, ಧರ್ಮಸ್ಥಳ ಸಿಎ ಬ್ಯಾಂಕ್‌ ಅಧ್ಯಕ್ಷ ಪ್ರೀತಂ ಧರ್ಮಸ್ಥಳ, ತಾ.ಪಂ ಮಾಜಿ ಸದಸ್ಯ ಸುಧೀರ್ ಆರ್ ಸುವರ್ಣ, ವಿನೀತ್ ಕೋಟ್ಯಾನ್ ಸಾವ್ಯ,ವಿನೋದಿನಿ ರಾಮಪ್ಪ,ಸುಜಾತ ಅಣ್ಣಿ ಪೂಜಾರಿ,ಪೂರ್ಣಿಮ ಸೋಮಂತಡ್ಕ,ಪ್ರಕಾಶ್ ಮುಂಡಾಜೆ, ದಯಾನಂದ ಬೆಳಾಲು,ಸಚಿನ್ ಕಲ್ಮಂಜ, ಅಜಿತ್ ಜೈನ್ ಧರ್ಮಸ್ಥಳ,ಕೃಷ್ಣಪ್ಪ ಬಿಕ್ಕಿರ, ಕೇಶವ ಭಟ್ ಅತ್ತಾಜೆ, ಮಹೇಶ್ ಕೋಟ್ಯಾನ್ ಜೆಂಕ್ಯಾರು, ಪದ್ಮನಾಭ ಶೆಟ್ಟಿಗಾರ್ ಪದ್ಮಶ್ರೀ,ರಾಜೇಂದ್ರ ಜೈನ್ ಧರ್ಮಸ್ಥಳ, ಭರತ್ ಕುಮಾರ್ ಉಜಿರೆ, ರಾಮಚಂದ್ರ ಶೆಟ್ಟಿ ಉಜಿರೆ,ಹುಕುಂ ರಾಮ್ ಪಾಟೀಲ್, ಲೋಕೇಶ್ ಶೆಟ್ಟಿ ಧರ್ಮಸ್ಥಳ, ಡಿ. ಪ್ರಭಾಕರ್ ಪೂಜಾರಿ, ಉಪನ್ಯಾಸಕ ಕೇಶವ ಗೇರುಕಟ್ಟೆ, ಯಕ್ಷಗಾನ ಅಕಾಡೆಮಿ ಸದಸ್ಯ ಗಂಗಾಧರ ಸಾಲಿಯಾನ್ ಬೆಳಾಲು, ಬಾಲಕೃಷ್ಣ ಗೌಡ ಮುಂಡ್ರೋಟ್ಟು, ಅಜಿತ್ ಕನ್ಯಾಡಿ, ಸುನೀಲ್ ಕನ್ಯಾಡಿ, ವಿನಾಯಕ ರಾವ್ ಕನ್ಯಾಡಿ, ಚಂದನ್ ಗುಡಿಗಾರ್, ಕೃಷ್ಣಪ್ಪ ಪೂಜಾರಿ ನಿಡಿಗಲ್, ಮೊದಲಾದವರು, ರಥ ಬೀದಿ ವ್ಯಾಪಾರಸ್ಥರು, ಶಿಷ್ಯ ವೃಂದದವರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ: ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಅಡಿಗಾಸ್ ಯಾತ್ರಾದ ಪ್ರವಾಸ ದರ್ಶನದ ಮಾಹಿತಿ ಕೈಪಿಡಿಯ ಅನಾವರಣ

Suddi Udaya

ಕಡಿರುದ್ಯಾವರ ನಿವಾಸಿ ಕೃಷ್ಣ ನಾಯಕ್ ನಿಧನ

Suddi Udaya

ಜಾತಿ ಗಣತಿ ಸಮೀಕ್ಷೆಯಲ್ಲಿ ಗೌಡ ಸಮಾಜ ಬಾಂಧವರು ಜಾತಿ ಕಾಲಂ ನಲ್ಲಿ ಒಕ್ಕಲಿಗ , ಉಪಜಾತಿಯ ಕಾಲಂ ನಲ್ಲಿ ಗೌಡ ಎಂದು ನಮೂದಿಸುವಂತೆ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮಗೌಡ ಹೇಳಿಕೆ

Suddi Udaya

ಸೀರೋ ಮಲಬಾರ್ ಧರ್ಮ ಸಭೆಯಲ್ಲಿ ವಿಭೂತಿ ಆಚರಣೆಯೊಂದಿಗೆ ವ್ರತಚಾರಣೆಯಕಾಲಕ್ಕೆ ಪ್ರವೇಶ

Suddi Udaya

ಒಟ್ಲ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಚಿತ್ತರಂಜನ್ ಕಂಕನಾಡಿ ದಂಪತಿಗಳಿಂದ ಸಂಕ್ರಮಣ ಪೂಜೆ

Suddi Udaya

ಕಳೆಂಜ ಗ್ರಾ.ಪಂ. ಮಾಜಿ ಸದಸ್ಯ ಕುಶಾಲಪ್ಪ ಗೌಡ ರಿಗೆ ಮಾತೃ ವಿಯೋಗ

Suddi Udaya
error: Content is protected !!