ಅಳದಂಗಡಿ: ಇಲ್ಲಿಯ ಕೆದ್ದು ಸುಶೀಲಾ ಕಾಂಪ್ಲೆಕ್ಸ್ ನಲ್ಲಿ ಅಳದಂಗಡಿ ಹಿಂದೂ ಯುವ ಶಕ್ತಿ ಆಲಡ್ಕ ಕ್ಷೇತ್ರ ರಾಜಕೀಯ ರಹಿತ ಸಾಮಾಜಿಕ ಸೇವಾ ಸಂಘಟನೆಯ ನೂತನ ಪ್ರದಾನ ಕಚೇರಿ ಉದ್ಘಾಟನೆಯು ನಡೆಯಿತು.
ಪ್ರದಾನ ಕಚೇರಿಯ ಉದ್ಘಾಟನೆ ನೇರವೇರಿಸಿ ಮಾತನಾಡಿದ ಶ್ರೀ ಮಂಗಳಗಿರಿ ಕ್ಷೇತ್ರ ಮುಂಡೂರು ಇಲ್ಲಿಯ ಧರ್ಮದರ್ಶಿಗಳು ರಾಜೀವ ಮುಂಡೂರು ಈ ಹಿಂದೂ ಯುವ ಶಕ್ತಿ ಆಲಡ್ಕ ಕ್ಷೇತ್ರ ಪ್ರದಾನ ಕಚೇರಿಯಿಂದ ಸಮಾಜಕ್ಕೆ ಮಾದರಿಯಾಗುವ ಕೆಲಸ ಕಾರ್ಯಗಳು ನಡೆದು ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರಿನ ಯುವ ಉದ್ಯಮಿಗಳು ವಾಗ್ಮಿಗಳು ಆಗಿರುವ ಕಿರಣ್ ಚಂದ್ರ ಡಿ ಪುಷ್ಪಗಿರಿ ರವರು ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಸೇವೆ ಎನಿಸುತ್ತದೆ ಸೇವೆ ಮಾಡುವುದು ನಮ್ಮ ಕರ್ತವ್ಯ ನಮ್ಮ ಬದುಕಿನ ಸಾರ್ಥಕ್ಯಕ್ಕೆ ಸೇವೆ ಕಾರಣವಾಗುತ್ತದೆ ಅನೇಕ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಈ ಸಂಘಟನೆ ಸಮಾಜಕ್ಕೆ ಮಾದರಿ ಮುಂದೆಯೂ ನಿಮ್ಮ ಪ್ರತಿಯೊಂದು ಸಾಮಾಜಿಕ ಕೆಲಸ ಕಾರ್ಯದಲ್ಲಿ ನಾನು ಕೂಡ ಭಾಗಿಯಾಗುವೆ ಎಂದು ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ನಿವೃತ್ತ ಯೋಧರು ಸುಬ್ಬಪುರ್ ಮಠ್ ಮಾತನಾಡಿ ಬಡ ಕುಟುಂಬದ ಕಣ್ಣೀರು ಒರೆಸುವ ಕಾರ್ಯ ಈ ಸಂಘಟನೆಯಿಂದ ನಡೆಯುತ್ತಿದೆ ತಾಲೂಕಿನಲ್ಲಿ ಹತ್ತು ಹಲವು ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನ ಮೆಚ್ಚುಗೆ ಪತ್ರಾರಾಗಿದ್ದೀರಿ ಮುಂದೆಯೂ ನಿಮ್ಮ ಜೊತೆ ಸದಾ ನನ್ನ ಸಹಕಾರ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ವೇದಿಕೆಯಲ್ಲಿ ರಾಯಲ್ ಟೈಗರ್ಸ್ ತಂಡದ ಪ್ರಮುಖರು ಶಿವ ಕುಮಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭಾ ಅಧ್ಯಕ್ಷತೆಯನ್ನು ಸಂಘಟನೆಯ ಗೌರವ ಅಧ್ಯಕ್ಷ ಶಿವಪ್ರಸಾದ್ ಅಜಿಲರು ವಹಿಸಿದರು. ಅಳದಂಗಡಿ ಅಭಿವೃದ್ಧಿ ಅಧಿಕಾರಿಯಾದ ಪೂರ್ಣಿಮಾ ಜೆ, ಡಾ | ಎನ್ ಎಂ ತುಳುಪುಳೆ, ಸಂಘಟನೆ ಪ್ರಮುಖರಾದ ಸುರೇಂದ್ರ ಆಚಾರ್ಯ ಸಿಲಿಕಾನ್ ಮೋಟಾರ್ಸ್ ಬೆಂಗಳೂರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಎರಡು ಅಶಕ್ತ ಕುಟುಂಬಗಳಿಗೆ ತಲಾ 10,000 ರೂಗಳ ಚೆಕ್ಕನ್ನು ಹಸ್ತಾಂತರಿಸಲಾಯಿತು
ಮತ್ತು ಶ್ರೀಗುರು ಚೈತನ್ಯ ಸೇವಾಶ್ರಮಕ್ಕೆ 60 ಕೆಜಿ ಅಕ್ಕಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರಂಬಾರು ಗ್ರಾಮದ ಪ್ರಗತಿಪರ ಕೃಷಿಕರಾದ ಶಿವಾನಂದ ಹೆಗ್ಡೆ ಪರ್ಲಾಂಡ ಇವರು ದೇಹದಾನ ನೊಂದಣಿಗೆ ಸಹಿ ಹಾಕುವ ಮುಖಾಂತರ ಸಮಾಜಕ್ಕೆ ಮಾದರಿಯಾದರು.
ಸಂಘಟನೆಯ ಅಧ್ಯಕ್ಷ ದೇವದಾಸ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹರೀಶ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಸಾನ್ವಿ ಕಡಂಬು ಪ್ರಾರ್ಥನೆ ನೆರವೇರಿಸಿದರು. ಸ್ನೇಹ ಕಟ್ಟೆ ಧನ್ಯವಾದ ನೀಡಿದರು.