33.6 C
ಪುತ್ತೂರು, ಬೆಳ್ತಂಗಡಿ
February 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲಾಯಿಲ ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

ಲಾಯಿಲ: ದೇಯಿ ಬೈದೆದಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾ. 1 ರಿಂದ ಮಾ. 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸುಗೊಳಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನ ಶ್ರೀ ಗುರು ನಾರಾಯಣ ಸೇವಾ ಸಂಘ ಲಾಯಿಲ ಗ್ರಾಮದಲ್ಲಿ ಗೆಜ್ಜೆಗಿರಿಯ ಭಕ್ತಾಭಿಮಾನಿಗಳ ಸಮಾಲೋಚನ ಸಭೆಯನ್ನುಫೆ. 2 ರಂದು ಆಯೋಜಿಸಲಾಗಿತ್ತು.


ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಗುರುನಾರಾಯಣ ಸೇವಾ ಸಂಘ ಲಾಯಿಲ ಇದರ ಅಧ್ಯಕ್ಷ ಲಾಯಿಲ ಜಿಲ್ಲಾ ಪಂಚಾಯತ್ ಕ್ಷೇತ್ರದ ವಲಯ ಸಂಚಾಲಕ ಲಕ್ಷ್ಮಣ ಪೂಜಾರಿಯವರು ಕ್ಷೇತ್ರದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು .


ಶ್ರೀ ಕ್ಷೇತ್ರ ಗೆಜ್ಜಗಿರಿ ಜಾತ್ರೆೋತ್ಸವ ಸಮಿತಿಯ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ರವರು ಶ್ರೀ ಕ್ಷೇತ್ರದಲ್ಲಿ ನಡೆಯುವ ಮಡಿಲು ಸೇವೆ ಹಾಗೂ ಉತ್ಸವದ ಮಾಹಿತಿಯನ್ನು ಸಭೆಗೆ ನೀಡಿ ತಾಲೂಕಿನ ಎಲ್ಲಾ ಭಕ್ತಾಭಿಮಾನಿಗಳನ್ನು ಜಾತ್ರೋತ್ಸವಕ್ಕೆ ಆಮಂತ್ರಿಸಿದರು.


ವೇದಿಕೆಯಲ್ಲಿ ಸಂಘ ದ ಗೌರವ ಸಲಹೆಗಾರರಾದ ಕೃಷ್ಣಪ್ಪ ಪೂಜಾರಿ, ಆನಂದ ಪೂಜಾರಿ ನಿನಿಕಲ್ಲು ಹಾಗೂ ಲಾಯಿಲ ಗ್ರಾಮದ ಹಲವಾರು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.


ಗುರುನಾರಾಯಣ ಸೇವಾ ಸಂಘ ಲಾಯಿಲ ಇದರ ಗೌರವ ಸಲಹೆಗಾರರಾದ ಜಯಾನಂದ ಲಾಯಿಲ ಸ್ವಾಗತಿಸಿ, ಗುರು ನಾರಾಯಣ ಸೇವಾ ಸಂಘ ನಡ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಲಾಯಿಲ ಜಿಲ್ಲಾ ಪಂಚಾಯತ್ ವಲಯ ಸಂಚಾಲಕಿ ಶ್ರೀಮತಿ ಸೌಮ್ಯ ಲಾಯಿಲ ಧನ್ಯವಾದವಿತ್ತರು.

Related posts

ಧರ್ಮಸ್ಥಳ: ಅನ್ಯಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

Suddi Udaya

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ : ಎಸ್‌ ಡಿ ಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ಕಾಶಿಪಟ್ಣ ಗ್ರಾ.ಪಂ. ನಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya

ಬೆಳ್ತಂಗಡಿ, ಪುತ್ತೂರು ಮತ್ತು ಬಂಟ್ವಾಳದ ಹಲವು ಕಡೆ ಎನ್‌ಐಎ ದಾಳಿ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ಕೊಕ್ಕಡ : ಶ್ರೀ ರಾಮ‌ ಸೇವಾ ಮಂದಿರಕ್ಕೆ ಅಡುಗೆ ಪಾತ್ರೆ, ಸಾಮಾಗ್ರಿಗಳ ಕೊಡುಗೆ

Suddi Udaya
error: Content is protected !!