ಪಡಂಗಡಿ : ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ 3 ರಿoದ ಪ್ರಾರಂಭಗೊಂಡು ಫೆ. 7 ರ ವರೆಗೆ ಜಾತ್ರಾಮಹೋತ್ಸವವು ನಡೆಯಲಿದ್ದು ತಂತ್ರಿಗಳಾದ ಉದಯ ಪಾಂಗಣ್ಣಾಯ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ ರಘುರಾಮ್ ಭಟ್ ಮಠ ಉಪಸ್ಥಿತಿಯಲ್ಲಿ ಫೆ 4 ರಂದು ದೇವರಿಗೆ ಪಂಚಾಮೃತ ಅಭಿಷೇಕ, ಸತರುದ್ರಾಭಿಷೇಕ, ನಿತ್ಯ ಬಲಿ ಉತ್ಸವ, ಮಹಾಪೂಜೆ, ಭದ್ರಕಾಳಿ ಭಜನಾ ಮಂಡಳಿ ಬೆಂಜನ ಪದವು ಹಾಗೂ ಸಾಮಗನ ಭಜನಾಮೃತ ಮಂಗಳೂರು ಇವರಿಂದ ವಿಶೇಷ ಭಜನಾ ಕಾರ್ಯಕ್ರಮ ಜರಗಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಫೆ 5 ರಂದು ರುದ್ರ ಹೋಮ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು.
ಸಾಯಂಕಾಲ ದರ್ಶನ ಬಲಿ ಉತ್ಸವ ಬಟ್ಟಲು ಕಾಣಿಕೆ ದೈವ, ದೇವರ ಭೇಟಿ ನವಶಕ್ತಿ ಭಜನಾ ಮಂಡಳಿ ಬೊಳ್ಪಗುಡ್ಡೆ ಕಾವೂರು ಮತ್ತು ರಾಮಾಂಜನೇಯ ಭಜನಾ ಮಂಡಳಿ ಕಾರ್ಲ ಪೇರ್ನೆ ಇವರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಲಿದೆ