September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ತಾಲೂಕು ಆಡಳಿತ ಸೌಧದಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ

ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣಾ ಸಮಿತಿ ಆಶ್ರಯದಲ್ಲಿ
ಬೆಳ್ತಂಗಡಿ ಸವಿತಾ ಸಮಾಜ ಸಂಘದ ಸಹಕಾರದೊಂದಿಗೆ ಸವಿತಾ ಮಹರ್ಷಿ ಜಯಂತಿ ಆಚರಣೆಯು ಜ.5 ರಂದು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಜರುಗಿತು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ದೀಪ ಪ್ರಜ್ವಲನೆ ಗೊಳಿಸಿ ಮಾತನಾಡಿ ಭಾರತದ ಆತ್ಮಮೇ ಆದ್ಯಾತ್ಮ. ದೇಶಕ್ಕೆ ಶ್ರೇಷ್ಠ ಚಿಂತನೆಯನ್ನು ನೀಡಿದವರು ಸವಿತಾ ಮಹರ್ಷಿಗಳು. ಸವಿತಾ ಮಹರ್ಷಿಗಳ ಬದುಕು ನಮಗೆಲ್ಲ ಪ್ರೇರಣೆ ಆಗಲಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಾಕೇಸರಿ ಮಾತನಾಡಿ, ಸವಿತಾ ಸಮಾಜ ಮೂಲ ಪುರುಷರು ಸವಿತಾ ಮಹರ್ಷಿಗಳು. 25 ಹೆಸರುಗಳಿಂದ ಸವಿತಾ ಸಮಾಜವನ್ನು ಕರೆಯುತ್ತಾರೆ. ಮನುಷ್ಯನಿಗೆ ಹುಟ್ಟಿನಿಂದ ಸಾಯುವ ತನಕ ಸವಿತಾ ಸಮಾಜದ ಸಹಾಯ ಬೇಕು ಎಂದು ಸವಿತಾ ಸಮಾಜದ ಇತಿಹಾಸವನ್ನು ತಿಳಿಸಿದರು.

ವೇದಿಕೆಯಲ್ಲಿ ಸವಿತಾ ಸಮಾಜದ ಉಪಾಧ್ಯಕ್ಷ ಪೂವಪ್ಪ ಭಂಡಾರಿ, ಉಪ ತಹಶೀಲ್ದಾರ್ ಶಂಕರ್ ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಹೇಮಾಲತಾ ನಿರೂಪಿಸಿದರು. ಗ್ರಾಮಾಡಳಿತ ತಾಲೂಕು ಕಚೇರಿಯ ಹೇಮಾ ವಂದಿಸಿದರು.

Related posts

ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ದ ಸಾಮಾನ್ಯ ಮಹಾಸಭೆ

Suddi Udaya

ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮೇ 28: ಮಿತ್ತಬಾಗಿಲು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲಾಮಯ ಧ್ವಜಸ್ತಂಭ

Suddi Udaya

ಕುತ್ರೊಟ್ಟು ಬಳಿ ಮಗುವಿಗೆ ದ್ವಿಚಕ್ರ ವಾಹನ ಢಿಕ್ಕಿ

Suddi Udaya

ಉಜಿರೆ: ಹಳೆಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ರಾಜ್ಯಮಟ್ಟದ ಪುರುಷರ ಹ್ಯಾಂಡ್ ಬಾಲ್ ಚಾಂಪಿಯನ್ಶಿಪ್ – ಮಾದಪ್ಪ ಸ್ಮಾರಕ ಟ್ರೋಫಿ

Suddi Udaya
error: Content is protected !!