ಬೆಳ್ತಂಗಡಿ : ಭಾರತ ಕೃಷಿ ಪ್ರಧಾನವಾದ ದೇಶ. ದೇಶದ ಆರ್ಥಿಕತೆಯ ಜೀವಾಳಾಗಿರುವ ದುಡಿಯುವ ರೈತರನ್ನು ದೇಶದ ಬೆನ್ನೆಲುಬೆಂದು ಕರೆಯುತ್ತೇವೆ. ಯುವ ಮನಸ್ಸುಗಳಲ್ಲಿ ಭತ್ತದ ಕೃಷಿಯತ್ತ ಆಕರ್ಷಿಸುವ, ಅವರಲ್ಲಿ ಒಲವು ಮೂಡಿಸುವ ದೃಷ್ಟಿಯಿಂದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಾಲ್ಕು ತಿಂಗಳ ಹಿಂದೆ ೫೦೦ ಕ್ಕೂ ಮಿಕ್ಕಿ ಕಾಲೇಜು ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ನೇಜಿ ನಾಟಿ ಮಾಡಿ ಕೃಷಿ ಬದುಕನ್ನು ಯುವ ಜನತೆಗೆ ಪರಿಚಯಿಸುವ ಕಾರ್ಯ ಮಾಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವಿರೇಂದ್ರ ಹೆಗ್ಗಡೆಯವರ, ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಬದುಕು ಕಟ್ಟೋಣ ಬನ್ನಿ ಸೇವಾ ಟ್ಟಸ್ಟ್ ಇವರ ನೇತೃತ್ವದಲ್ಲಿ ಶ್ರೀ ಧ.ಮಂ.ಕಾಲೇಜು (ಸ್ವಾಯತ್ತ), ಶ್ರೀ ಧ.ಮಂ.ಕಾಲೇಜು ರಾಷ್ಟಿçÃಯ ಸೇವಾ ಯೋಜನಾ ಘಟಕಗಳು ಉಜಿರೆ, ಶ್ರೀ ಧ.ಮಂ. ಸ್ಟೋಟ್ಸ್ ಕ್ಲಬ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ, ವ್ಯವಸ್ಥಾಪನಾ ಸಮಿತಿ ಅನಂತಪದ್ಮನಾಭ ದೇವಸ್ಥಾನ, ಅನಂತೋಡಿ, ಬೆಳಾಲು ಇದರ ಸಹಯೋಗದಲ್ಲಿ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ವಠಾರದಲ್ಲಿ ಯುವಸಿರಿ ರೈತ ಭಾರತದ ಐಸಿರಿ ಕಲ್ಪನೆಯಂತೆ ವಿದ್ಯಾರ್ಥಿಗಳಲ್ಲಿ ಭತ್ತದ ಕೃಷಿ ಅರಿವು ಮೂಡಿಸಲು ಮಾಡಿದ ಭತ್ತದ ಕೃಷಿಯ ಕಟಾವು ಕಾರ್ಯಕ್ರಮ ಸುಮಾರು ಸಾವಿರಕ್ಕೂ ಅಧಿಕ ಯುವಜನತೆಯಿಂದ ಫೆ.೯ ರಂದು ನಡೆಯಲಿದೆ.
ಕಾರ್ಯಕ್ರಮವನ್ನು ಸೋನಿಯ ಯಶೋವರ್ಮ ಉದ್ಟಾಟಿಸಲಿದ್ದು ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶೀಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಎಸ್ ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್, ತಹಶೀಲ್ದಾರ್ ಪೃಥ್ವಿ ಸಾನಿಕಂ, ಧ.ಗ್ರಾ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್ ಎಸ್, ರುಡ್ ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್, ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಬಿ.ಎ ಕುಮಾರ್ ಹೆಗ್ಡೆ, ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ರೊ.ಪೂರನ್‌ವರ್ಮ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಬದುಕು ಕಟ್ಟೋಣ ಬನ್ನಿ ಸೇವಾ ಟ್ಟಸ್ಟ್ನ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಬೆಳಾಲು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪಧಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಸಾವಿರಕ್ಕೂ ಅಧಿಕ ಯುವಜನತೆ ಭಾಗವಹಿಸಲಿದ್ದಾರೆ ಎಂದು ಬದುಕು ಕಟ್ಟೋಣ ಸಂಘದ ಸಂಚಾಲಕರಾದ ಮೋಹನ್ ಕುಮಾರ್, ರಾಜೇಶ್ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾವಿರಕ್ಕೂ ಯುವ ಜನತೆಯಿಂದ ಭತ್ತ ಕಟಾವು:
ಸುಮಾರು ನಾಲ್ಕೂವರೆ ಎಕರೆಯಲ್ಲಿ ನೇಜಿ ನಾಟಿ ಮಾಡಿ ನಾಲ್ಕೂ ತಿಂಗಳಲ್ಲಿ ಸಮೃದ್ದವಾಗಿ ಬೆಳೆದು ಭತ್ತದ ಪೈರು ಎದ್ದು ನಿಂತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನತೆಗೆ ಕೃಷಿಯ ಬಗ್ಗೆ ಆಸಕ್ತಿ, ಒಲವು ಕಡಿಮೆಯಾಗಿದೆ. ಯುವಜನತೆಗೆ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಸದುದ್ದೇಶದಿಂದ ಒಂದು ಸಾವಿರ ಯುವ ಜನತೆಯಿಂದ ಭತ್ತ ಕಟಾವು ಮಾಡಲಾಗುತ್ತದೆ.
ಅಕ್ಕಿ ದೇವರ ನೈವೇದ್ಯಕ್ಕೆ ಸಮರ್ಪಣೆ: ಮೋಹನ್ ಕುಮಾರ್
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆಯವರ ಆಶೀರ್ವಾದದಿಂದ ಬದುಕು ಕಟ್ಟೋಣ ಬನ್ನಿ ತಂಡ ಸಮಾಜದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕಳೆದ ಬಾರಿ ೫೦೦ ವಿದ್ಯಾರ್ಥಿಗಳಿಂದ ನೇಜಿ ನಾಟಿ ಮಾಡಿ ಭತ್ತ ಕಟಾವುಗೆ ೧೦೦೦ ಯುವ ಮನಸ್ಸುಗಳು ಭಾಗವಹಿಸಲಿದ್ದಾರೆ. ಈಗಾಗಲೇ ಭತ್ತ ಕಟಾವುಗೆ ೧೦೦೦ ಕತ್ತಿ ರೆಡಿಯಾಗಿದ್ದು, ೧೦೦೦ ಮುಟ್ಟಾಲೆ ಕೆಲಸ ನಡೆಯುತ್ತಿದೆ. ಗದ್ದೆಯಲ್ಲಿ ಕೆಲಸಕ್ಕೆ ಉಡುಗೆ ತೊಡುಗೆಗಳನ್ನು ತಯಾರಿಸಲಾಗಿದೆ. ಭತ್ತ ಕಟಾವು ಆದ ಮೇಲೆ ದೇವಸ್ಥಾನದ ಅಂಗಳದಲ್ಲಿ ಭತ್ತ ಬೇರ್ಪಡಿಸಿ, ನಾಡಿನ ಹಲವು ದೇವಸ್ಥಾನಗಗಳಿಗೆ ನೈವೇದ್ಯಕ್ಕೆ ನೀಡಲಾಗುತ್ತದೆ. ಪೈರನ್ನು ನಂದಗೋಕುಲ ಗೋಶಾಲೆಗೆ ಹಸ್ತಾಂತರಿಸಲಿದ್ದೇವೆ ಎಂದು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.