April 21, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವೇಣೂರು: ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣ ಕಳವು

ವೇಣೂರು: ವೇಣೂರು ಕೆಥೋಲಿಕ್‌ ಬ್ಯಾಂಕ್‌ ಲೋನ್‌ ಕಟ್ಟುವ ಸಲುವಾಗಿ ಅಡಿಕೆ ಮಾರಾಟ ಮಾಡಿ ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣವು ಕಳವುವಾಗಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಫೆ.5 ರಂದು ದೂರು ದಾಖಲಾಗಿದೆ.

ಘಟನೆ ವಿವರ: ಪೆರ್ಮುಡ ನಿವಾಸಿ ಪ್ರಭಾಕರ ರವರು ವೇಣೂರು ಕೆಥೋಲಿಕ್‌ ಬ್ಯಾಂಕ್‌ ಲೋನ್‌ ಕಟ್ಟುವ ಸಲುವಾಗಿ ಅಡಿಕೆ ಮಾರಾಟ ಮಾಡಿ ಬಂದ ರೂ 2.25 ಲಕ್ಷ ನಗದು ಹಣವನ್ನು ತನ್ನ ಮನೆಯಾದ ನಿಟ್ಟಡೆ ಗ್ರಾಮದ ಪೆರ್ಮುಡ ಉದಯಸದನ ಮನೆ ಎಂಬಲ್ಲಿ ಬೆಡ್‌ ರೂಮ್‌ ಒಂದರ ಸೆಲ್ಫ್‌ ನಲ್ಲಿ ಚಾಪೆ ಅಡಿಯಲ್ಲಿ ಇಟ್ಟಿದ್ದರು.ಸದ್ರಿ ಹಣವನ್ನು ಪ್ರಭಾಕರ ರವರು ಫೆ.03 ರಂದು ಬೆಳಿಗ್ಗೆ ನೋಡಿದ್ದರು. ಆದರೆ ಅದೇ ದಿನ ಸಂಜೆ ನೋಡಿದಾಗ ಹಣವು ಕಾಣೆಯಾಗಿರುತ್ತದೆ.


ಪ್ರಭಾಕರ ಅಡಿಕೆ ಮಾರಾಟ ಮಾಡಿರುವ ವಿಚಾರ ನೆರೆಮನೆಯ ವಿಜಯ ಮೋನಿಸ್‌ ಎಂಬಾತನಿಗೆ ತಿಳಿದಿರುತ್ತದೆ. ಫೆ. 03 ರಂದು ವಿಜಯ ಮೋನಿಸ್‌ ಪ್ರಭಾಕರ ರವರ ಮನೆಗೆ ಬಂದು ಹೋಗಿದ್ದರು.
ಪ್ರಭಾಕರ ರವರು ಕಾಣೆಯಾದ ಹಣದ ಬಗ್ಗೆ ಮನೆಯಲ್ಲಿ ಹುಡುಕಾಡಿ ಮನೆಗೆ ಬಂದಿದ್ದ ವಿಜಯ ಮೋನಿಸ್‌ ನನ್ನು ವಿಚಾರಿಸಿ ಹಣ ಪತ್ತೆಯಾಗದೇ ಇರುವುದರಿಂದ ಇದೀಗ ವೇಣೂರು ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಾಣೆಯಾದ ಹಣವನ್ನು ವಿಜಯ ಮೋನಿಸ್‌ ಎಂಬಾತನೇ ತೆಗೆದಿರಬಹುದು ಎಂಬ ಬಗ್ಗೆ ಬಲವಾದ ಸಂಶಯ ವ್ಯಕ್ತಪಡಿಸಿದ್ದಾರೆ . ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಸಾವ್ಯ: ಕರ್ಂಬಲೆಕ್ಕಿಯಲ್ಲಿ ಪುರುಷರ ರಾಶಿ ಪೂಜೆ

Suddi Udaya

ಉಜಿರೆ: ಶಾರದಾ ಕುಟುಂಬ ವಿಕಸನ ಮಂಡಳಿ ವತಿಯಿಂದ ‘ವಿದ್ಯಾರ್ಥಿ ಸಬಲೀಕರಣ ಮತ್ತು ರಕ್ಷಾನಿಧಿ’ ಕಾರ್ಯಯಾನ ಉದ್ಘಾಟನೆ

Suddi Udaya

ಸೆ.8: ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ನೂತನ ಕಟ್ಟಡ ಉದ್ಘಾಟನೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಕಣಿಯೂರು ಮಹಾಶಕ್ತಿಕೇಂದ್ರದ ಸಭೆ

Suddi Udaya

ಸೆ.19(ನಾಳೆ): ಬೆಳ್ತಂಗಡಿ ಉಪವಿಭಾಗದ ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್‌ ನಿಲುಗಡೆ

Suddi Udaya

ಬೆಳಾಲು: ನಾಲ್ಕು ತಿಂಗಳ ಹೆಣ್ಣು ಮಗು ಕಾಡಿನಲ್ಲಿ ಪತ್ತೆ: ಸಾರ್ವಜನಿಕರಿಂದ ರಕ್ಷಣೆ

Suddi Udaya
error: Content is protected !!