ಉಜಿರೆ ಗ್ರಾಮದ ಹಳೆಪೇಟೆ- ಕುತ್ರೋಟ್ಟು ಹೋಗುವ ರಸ್ತೆ ಚರಂಡಿ, ಕಾಂಕ್ರೀಟ್ ರಸ್ತೆ ಮಾಡಿಕೊಡುವಂತೆ ಕುಂಟಿನಿ ಕಾಂಗ್ರೆಸ್ ಬೂತ್ ಸಮಿತಿ ವತಿಯಿಂದ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಸಂಬಂಧಪಟ್ಟ ಕಂಟ್ರೋಕ್ಟರ್, ಇಂಜಿನಿಯರ್ ಲೋಕೋಪಯೋಗಿ ಅಧಿಕಾರಿಗೆ ಕರೆ ಮಾಡಿ ಆದಷ್ಟು ಶೀಘ್ರ ಮಾಡಿಕೊಡುವುದಾಗಿ ಭರವಸೆ ನೀಡಿರುವರು.
ಈ ಸಂದರ್ಭದಲ್ಲಿ ಯು ಕೆ ಹನೀಫ್ ಜಿಲ್ಲಾ ಅಲ್ಪಸಂಖ್ಯಾ ಘಟಕದ ಉಪಾಧ್ಯಕ್ಷರು, ಅಬ್ದುಲ್ ರಹ್ಮಾನ್ ತಾಲೂಕು ಅಲ್ಪಸಂಖ್ಯಾ ಘಟಕದ ಕಾರ್ಯದರ್ಶಿಗಳು, ಮೊಹಮ್ಮದ್ ಕುಂಞಿ ಕತ್ತಾರ್ ತಾಲೂಕು ಅಲ್ಪಸಂಖ್ಯಾ ಘಟಕದ ಉಪಾಧ್ಯಕ್ಷರು, ಅಬೂಬಕರ್, ಷರೀಫ್ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಉಸ್ಮಾನ್ ಆಟೋ, ಹಮೀದ್, ಝಮೀರ್ ನಜಾತ್, ಉಬೈದ್ ನಜಾತ್ ಹಾಗು ಇನ್ನಿತರರು ಉಪಸ್ಥಿತರಿದ್ದರು.