ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ಜಿ.ಪಂ ಮಾಜಿ ಸದಸ್ಯ ಕೊರಗಪ್ಪ ನಾಯ್ಕ ಮುಂಡಾಜೆ ಅವರು ನೇಮಕಗೊಂಡಿದ್ದಾರೆ. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಶಿಪಾರಸಸಿನ ಮೇರೆಗೆ ಭಾರತ್ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಸೆನ್ಸೆಲ್)ನ ಸಲಹಾ ಸಮಿತಿಗೆ ಎಂಟು ಮಂದಿಯನ್ನು ನೇಮಕಗೊಳಿಸಿ ದೂರ ಸಂಪರ್ಕ ಸಚಿವಾಲಯ ಆದೇಶ ಹೊರಡಿಸಿದೆ.
ಕೊರಗಪ್ಪ ನಾಯ್ಕ ಅವರು ಧರ್ಮಸ್ಥಳ ಜಿ.ಪಂ ಕ್ಷೇತ್ರದ ಮಾಜಿ ಸದಸ್ಯರಾಗಿ, ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ, ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.