![](https://suddiudaya.com/wp-content/uploads/2025/02/janowshadi3.jpg)
ಬೆಳ್ತಂಗಡಿ: ಬೆಳ್ತಂಗಡಿ ಸಂತೆಕಟ್ಟೆ ಹೆರಾಜೆ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಗೊಂಡ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಉದ್ಘಾಟನೆಯನ್ನು ಸಂಸದ ಬ್ರಿಜೇಶ್ ಚೌಟರವರು ಫೆ. 8 ರಂದು ನೇರವೇರಿಸಿ ಶುಭ ಕೋರಿದರು.
![](https://suddiudaya.com/wp-content/uploads/2025/02/janowshadhi2.jpg)
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಎನ್., ತಾಲೂಕು ಆರೋಗ್ಯ ಅಧಿಕಾರಿ, ಡಾ.ಸಂಜಾತ್, ಬೆಳ್ತಂಗಡಿ ಪ.ಪಂ. ಜಯಾನಂದ ಎಂ., ಕಟ್ಟಡ ಮಾಲಕ ಉಮೇಶ್ ಎನ್. ಹೆರಾಜೆ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಮಾಜಿ ನೋಡಲ್ ಅಧಿಕಾರಿ ಡಾ| ಅನಿಲ ದೀಪಕ್ ಶೆಟ್ಟಿ ಉಪಸ್ಥಿತರಿದ್ದರು.
![](https://suddiudaya.com/wp-content/uploads/2025/02/janowshadi.jpg)
ನಂತರ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ಹಾಗೂ ಉಚಿತ ಮಧುಮೇಹ ಪರೀಕ್ಷಾ ಶಿಬಿರ ಕಾರ್ಯಕ್ರಮವು ಜರುಗಿತು.
ಜನೌಷಧಿ ಕೇಂದ್ರದ ಮಾಲಕರು ಶ್ರೀಮತಿ ಉಷಾ ಶ್ರೀಧರ ಭಂಡಾರಿ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿದರು.