September 6, 2026
ತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದ ಶ್ರೀ ಗುರು ಸಾಲಗಾರರ ಮರಣ ನಿಧಿ ವಿತರಣೆ

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ ಹೊಸ್ಮಾರ್ ಶಾಖೆಯ ಸಾಲಗಾರರಾದ ಗುರುಮೂರ್ತಿ ಇವರು ಅಕಾಲಿಕ ಮರಣ ಹೊಂದಿರುತ್ತಾರೆ. ಸಂಘದ ವಿಶೇಷ ಯೋಜನೆಯಾದ ಶ್ರೀ ಗುರು ಸಾಲಗಾರರ ಮರಣ ನಿಧಿಯಿಂದ ಮರಣ ಹೊಂದಿದ ಸಾಲಗಾರರ ಸಾಲಗಳನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸುವ ಉದ್ದೇಶದಿಂದ ಇವರಿಗೆ ನೀಡಲಾದ ಸಾಲವನ್ನು ಸಂಘದ ಆಡಳಿತ ಮಂಡಳಿಯ ಮಂಜೂರಾತಿ ಮೇರೆಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸಿ. ಇವರ ಕುಟುಂಬದವರಿಗೆ ಸಾಲದಿಂದ ಋಣ ಮುಕ್ತಾಯಗೊಳಿಸಿದ ಖಾತ್ರಿ ಪತ್ರವನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಡಾ.ರಾಜಾರಾಮ ಕೆ.ಬಿ, ಜಯವಿಕ್ರಮ್ ಪಿ, ಪುರುಷರಕಟ್ಟೆ ಪ್ರಭಾರ ಶಾಖಾ ವ್ಯವಸ್ಥಾಪಕ ಪವನ್ ಕೆ ಉಪಸ್ಥಿತರಿದ್ದರು.


ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಈಗಾಗಲೇ ಈ ಯೋಜನೆಯ ಅನ್ವಯ 83 ಕುಟುಂಬಗಳಿಗೆ ರೂ.61,58,593/- ಮೊತ್ತದ ಸಾಲಗಾರರ ಮರಣ ನಿಧಿಯನ್ನು ನೀಡಿ ಅವಲಂಬಿತ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ಸದ್ರಿ ಕುಟುಂಬಗಳನ್ನು ಋಣ ಮುಕ್ತಗೊಳಿಸಿ ಸಹಕಾರ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆಯನ್ನು ಮಾಡುತ್ತಿದೆ.

Related posts

ಕೊಕ್ರಾಡಿ : ಕೈತ್ರೋಡಿ ನಿವಾಸಿ ವಜ್ರ ಕುಮಾರ್ ಜೈನ್ ನಿಧನ

Suddi Udaya

ಪುದುವೆಟ್ಟು: ಡಿಸೇಲ್ ಪೈಪ್ ಲೈನ್ ಕೊರೆದು ರೂ. 9 ಲಕ್ಷ ಮೌಲ್ಯದ ಡಿಸೇಲ್ ಕಳ್ಳತನ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಹೊಸಪಟ್ಣ ಹಾಲು ಉ.ಸ. ಸಂಘ: ಮಹಾಸಭೆ

Suddi Udaya

ಬೆಳ್ತಂಗಡಿ ತಾಲೂಕು ರಾಜ ಕೇಸರಿ ಟ್ರಸ್ಟಿನ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ: ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ: ಆದಿನಾಥ ಬಜಾಜ್ ನಲ್ಲಿ ಆಯುಧ ಪೂಜೆ

Suddi Udaya
error: Content is protected !!