ನಿಡ್ಲೆ: ಅಗ್ರಿಲೀಫ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಇದರ ವಿಸ್ತ್ರತ ಘಟಕದ ಉದ್ಘಾಟನಾ ಸಮಾರಂಭ ” ಅಗ್ರಿಲೀಫ್ 2.0 ” ರೈತರ ಜೊತೆ – ವಿಶ್ವದ ಕಡೆ ಕಾರ್ಯಕ್ರಮವು ಫೆ.8 ರಂದು ನಿಡ್ಲೆ ಅಗ್ರಿಲೀಫ್ ಸಂಸ್ಥೆ, ಬರಂಗಾಯದಲ್ಲಿ ನಡೆಯಿತು.
![](https://suddiudaya.com/wp-content/uploads/2025/02/IMG-20250208-WA0002-1-1024x473.jpg)
ಮುಖ್ಯ ಅತಿಥಿಗಳಾಗಿ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಮಂಗಳೂರು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಸತ್ಯನಾರಾಯಣ, ರಾಗ್ನೇಶ್ ಸಾಲಿಯಾನ್ ಬೆಳ್ತಂಗಡಿ, ಅಗ್ರಿಲೀಫ್ ಸಂಸ್ಥೆಯ ಸ್ಥಾಪಕ ಅವಿನಾಶ್ ರಾವ್ ಹಾಗೂ ಸಹಸಂಸ್ಥಾಪಕ ಅತಿಶಯ ಎಂ. ಜೈನ್ ಉಪಸ್ಥಿತರಿದ್ದರು.
![](https://suddiudaya.com/wp-content/uploads/2025/02/IMG-20250208-WA0004-1-1024x473.jpg)
ಈ ಸಂದರ್ಭದಲ್ಲಿ ಸ್ಥಾಪಕರ ತಾಯಿ ಲಲಿತ ಅಮ್ಮರವರನ್ನು ಸನ್ಮಾನಿಸಲಾಯಿತು. ಅಲ್ಲದೇ ಸಂಸ್ಥೆಯಲ್ಲಿ ಸಾಧನೆ ಮಾಡಿದ ಉದ್ಯೋಗಿಗಳನ್ನು ಗುರುತಿಸಲಾಯಿತು.
![](https://suddiudaya.com/wp-content/uploads/2025/02/IMG-20250208-WA0005-1-1024x473.jpg)
ಅವಿನಾಶ್ ರಾವ್ ಸ್ವಾಗತಿಸಿದರು.ಪೃಥ್ವಿ ಕಾರ್ಯಕ್ರಮ ನಿರೂಪಿಸಿದರು. ಅತಿಶಯ ಜೈನ್ ವಂದಿಸಿದರು. ನಂತರ ಸಂಸ್ಥೆಯ ಉದ್ಯೋಗಿಗಳಿಂದ ಮನೋರಂಜನ ಕಾರ್ಯಕ್ರಮ, ರಾತ್ರಿ ಪ್ರಸಿದ್ಧ ಕಲಾವಿದರಿಂದ ಇಂದ್ರಜಿತ್ ಕಾಳಗ-ಲವ ಕುಶ ಯಕ್ಷಗಾನ ಪ್ರದರ್ಶನ ಜರುಗಲಿದೆ.
![](https://suddiudaya.com/wp-content/uploads/2025/02/IMG-20250208-WA0003-1-1024x473.jpg)