September 6, 2026
ನಿಧನ

ಬೈಕ್ ಡಿಕ್ಕಿ: ಗಾಯಾಳು ಕಡಿರುದ್ಯಾವರ ಅಂತರ ಲೋಕಯ್ಯ ಗೌಡ ಮೃತ್ಯು

ಬೆಳ್ತಂಗಡಿ:ಮುಂಡಾಜೆ-ದಿಡುಪೆ ರಸ್ತೆಯ ಕಡಿರುದ್ಯಾವರ ಗ್ರಾಮದ ಕನಪಾಡಿ-ಇಂದಬೆಟ್ಟು ಕ್ರಾಸ್ ಸಮೀಪ ಶುಕ್ರವಾರ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.


ಪಾದಚಾರಿ ಕಡಿರುದ್ಯಾವರದ ಅಂತರ ಲೋಕಯ್ಯ ಗೌಡ(65) ಎಂಬವರಿಗೆ
ದಿಡುಪೆ ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದು,ಗಂಭೀರವಾಗಿ ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೃತರಿಗೆ ಪತ್ನಿ,ಪುತ್ರಿ ಹಾಗೂ ಪುತ್ರ ಇದ್ದಾರೆ. ಘಟನೆ ಬಗ್ಗೆ ಬೈಕ್ ಸವಾರ ಚರಣ್ ರಾಜ್ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

ಆಟೋ ಚಾಲಕ ಯಶೋಧರ ಗೌಡ ಅಸೌಖ್ಯದಿಂದ ನಿಧನ

Suddi Udaya

ಬೆಳ್ತಂಗಡಿ ಪಿ. ಎಲ್. ಡಿ ಬ್ಯಾಂಕಿನ ನಿರ್ದೇಶಕ ಲೋಕಯ್ಯ ಗೌಡ ನಿಧನ

Suddi Udaya

ಮಡಂತ್ಯಾರು ಗ್ರಾ.ಪಂ ಮಾಜಿ ಸದಸ್ಯ ಸತೀಶ್ ಶೆಟ್ಟಿ ಕುರ್ಡುಮೆ ನಿಧನ

Suddi Udaya

ಮುಂಡಾಜೆ : ಅರೆಕ್ಕಲ್ ನಿವಾಸಿ ಹಿರಿಯ ಕೃಷಿಕ ಇಸ್ಮಾಯಿಲ್ ಹಾಜಿ ಮೂಲೆ ನಿಧನ

Suddi Udaya

ವೇಣೂರು: ನೇಮಕ್ಕು ನಿಧನ

Suddi Udaya

ಕೊಕ್ಕಡ: ಹಾರ ನಿವಾಸಿ ಮೋಹನ ಗೌಡ ನಿಧನ

Suddi Udaya
error: Content is protected !!