ಉರುವಾಲು: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಇಲ್ಲಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮವು ಜಾತ್ರೋತ್ಸವ ಕಾರ್ಯಕ್ರಮದ ಗೌರವಾಧ್ಯಕ್ಷ ದಾಸಪ್ಪ ಗೌಡ ಕೋಡಿಯಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
![](https://suddiudaya.com/wp-content/uploads/2025/02/korinja2.jpg)
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಈ ವೇಳೆ ದೇವೇಂದ್ರ ಹೆಗ್ಡೆ ಕೊಕ್ರಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ದೇವರ ಬಿಲ್ಲೆ ಮರೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶಂಕರ್ ನಾಯಕ್ ರೈತಬಂಧು ಆಹಾರೋದ್ಯಮ ಮಾರುತೀಪುರ ಕಣಿಯೂರು, ಮೋನಪ್ಪ ಪೂಜಾರಿ ಕಂಡೆತ್ಯಾರು ಆಡಳಿತ ಮೊಕ್ತೇಸರರು ಬಾಲಸುಬ್ರಹ್ಮಣ್ಯ ದೇವಸ್ಥಾನ ಮಡವು ಪಾಂಡವರಕಲ್ಲು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಗೌಡ ಅಣವು, ದೇವಸ್ಥಾನ ಸಹಮೋಕ್ತೇಸರರಾದ ಸೇಸಪ್ಪ ರೈ ಕೊರಿಂಜ , ಸೀತಾರಾಮ ಆಳ್ವ ಕೊರಿಂಜ, ಉಪಸ್ಥಿತರಿದ್ದರು.
![](https://suddiudaya.com/wp-content/uploads/2025/02/korinja3.jpg)
ಯಮುನಾ ತುಂಬ್ಯ ಮತ್ತು ವೆಂಕಟ್ರಮಣ ಭಟ್ ಸರಳಿ ಇವರನ್ನು ಗೌರವಪೂರ್ವಕವಾಗಿ ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ಜಾತ್ರೋತ್ಸವ ಕಾರ್ಯಕ್ರಮದ ಕಾರ್ಯದರ್ಶಿ ಶ್ರೀಮತಿ ಕೇಶವತಿ ಉರುವಾಲು ಇವರ ಧನ್ಯವಾದವಿತ್ತರು.
ಮೈರೋಳ್ತಡ್ಕ ಶಾಲೆಯ ಸಹಶಿಕ್ಷಕ ಮಾಧವ ಗೌಡ ಕಾರ್ಯಕ್ರಮ ನಿರೂಪಿಸಿದರು.