![](https://suddiudaya.com/wp-content/uploads/2025/02/18-copy-1.jpg)
ಬೆಳ್ತಂಗಡಿ: ಧರ್ಮಸ್ಥಳ ಕಡೆಯಿಂದ ಚಾರ್ಮಾಡಿಯತ್ತ ಸಾಗುತ್ತಿದ್ದ ಕಾರೊಂದು ಹಲವು ವಾಹನಗಳಿಗೆ ಡಿಕ್ಕಿಯಾಗಿ, ಬಳಿಕ ಚಾರ್ಮಾಡಿಯಲ್ಲಿ ಮನೆಯೊಂದರ ಆವರಣಕ್ಕೆ ಡಿಕ್ಕಿ ಹೊಡೆದ ಘಟನೆ ಫೆ.10 ರಂದು ನಡೆದಿದೆ.
![](https://suddiudaya.com/wp-content/uploads/2025/02/acci.jpg)
![](https://suddiudaya.com/wp-content/uploads/2025/02/acci2.jpg)
ಧರ್ಮಸ್ಥಳದಿಂದ ಚಾರ್ಮಾಡಿವರೆಗೂ ಅಲ್ಲಲ್ಲಿ ಡಿಕ್ಕಿ ಹೊಡೆದ ಕಾರು ಚಾರ್ಮಾಡಿಯಲ್ಲಿ ಮನೆ ಆವರಣ ಒಂದಕ್ಕೆ ಡಿಕ್ಕಿ ಹೊಡೆದ ಕಾರಣ ಮುಂದಕ್ಕೆ ಚಲಿಸದೆ ನಿಂತಿದೆ. ಅಲ್ಲಲ್ಲಿ ಡಿಕ್ಕಿ ಹೊಡೆದ ಈ ಕಾರನ್ನು ಹಲವರು ಹಿಂಬಾಲಿಸಿ ಬಂದ ಘಟನೆಯು ನಡೆಯಿತು. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಪೋಲಿಸರು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.