September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಾ.14-19: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ

ಪೆರಿಂಜೆ: ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.೧೪ ರಿಂದ ಪ್ರಾರಂಭಗೊಂಡು ಮಾ.೧೯ರವರೆಗೆ ನಡೆಯಲಿದೆ.


ಮಾ.14 ರಂದು ಮಧ್ಯಾಹ್ನ ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಅಮ್ಮನವರಿಗೆ ವರಹ ಪೂಜೆ, ರಾತ್ರಿ ಗಂಟೆ 9.30ಕ್ಕೆ ಪಡ್ಡ್ಯೋಡಿಗುತ್ತಿನಲ್ಲಿ ಉಪಹಾರ ರಾತ್ರಿ ಗಂಟೆ 10.00 ಕ್ಕೆ ಪಡ್ಡ್ಯೋಡಿಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು, ಪಡ್ಡ್ಯಾರಬೆಟ್ಟಕ್ಕೆ ಆಗಮನ, ಧ್ವಜಾರೋಹಣ, ಬಲಿ, ಚೆಂಡು ನಡೆಯಲಿದೆ.
ಮಾ.15 ರಂದು ಭೂತಬಲಿ ಉತ್ಸವ, ಮಾ.16 ರಂದು ಅಂಬೋಡಿ, ಬಲಿ ಉತ್ಸವ, ಹೂವಿನ ಪೂಜೆ, ರಥಾರೋಹಣ, ಮಾ.17 ರಂದು ವರ್ಷಾವಧಿ ಜಾತ್ರೋತ್ಸವ, ಮಧ್ಯಾಹ್ನ ಗಂಟೆ ೧೨ಕ್ಕೆ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ 1.30 ರಿಂದ 7.30 ರ ತನಕ ಮಹಾ ಅನ್ನಸಂತರ್ಪಣೆ ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ, ಮಾ.18 ರಂದು ಧ್ವಜ ಅವರೋಹಣ, ಸಂಪ್ರೋಕ್ಷಣೆ ಪಡ್ಡ್ಯೋಡಿ ಗುತ್ತಿಗೆ ಭಂಡಾರ ಹಿಂದಿರುಗುವುದು. ಮಾ.19 ರಂದು ರಾತ್ರಿ ಗಂಟೆ 7.30 ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನ ಪೂಜೆ, ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ ನಡೆಯಲಿದೆ. ರಾತ್ರಿ ಗಂಟೆ 8 ರಿಂದ ಜೀ ಕನ್ನಡ ಸರಿಗಮಪ ಖ್ಯಾತಿಯ ಕರ್ನಾಟಕದ ಹೆಸರಾಂತ ಕಲಾವಿದೆ ವಿದುಷಿ ಸಾಧ್ವಿನಿ ಕೊಪ್ಪ ಮತ್ತು ತಂಡದವರಿಂದ ಗಾನ ಸುರಭಿ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಅನುವಂಶೀಯ ಆಡಳಿತದಾರರು ಎ. ಜೀವಂಧರ ಕುಮಾರ್ ಯಾನೆ ಕಂಚಿ ಪೂವಣಿಯವರು ಪಡ್ಡ್ಯೋಡಿಗುತ್ತು ತಿಳಿಸಿದ್ದಾರೆ.
ಪ್ರತಿ ಸಂಕ್ರಮಣ ಮತ್ತು ಜಾತ್ರಾ ಸಮಯದ 5 ದಿನಗಳು ಅನ್ನಸಂತರ್ಪಣೆ ಸೇವೆ ನಡೆಯಲಿರುವುದು.

Related posts

ಶಾಸಕರ ಕಾರ್ಮಿಕ ಪರ ಬದ್ಧತೆ – ಬಿಎಮ್‌ಎಸ್ ಸ್ವಾಗತ; ಅನಿಲ್ ಕುಮಾರ್ ಯು

Suddi Udaya

ವಾಣಿ ಆಂ.ಮಾ. ಶಾಲೆಯ ಕು. ಶಾನ್ವಿ ಕುಲಾಲ್ ಕರಾಟೆ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ

Suddi Udaya

ಹಿರಿಯ ಪತ್ರಕರ್ತ ಪ್ರೊ. ನಾ ’ವುಜಿರೆ’ಯವರಿಗೆ ಬೆಳ್ತಂಗಡಿ ಪತ್ರಕರ್ತರ ಸಂಘದಿಂದ ನುಡಿ ನಮನ

Suddi Udaya

ನಾಳ ಶರನ್ನವರಾತ್ರಿ ಪೂಜೆ ಮತ್ತು ಭಜನೋತ್ಸವ

Suddi Udaya

ಬಿ.ಜೆ.ಪಿ ಅಭ್ಯರ್ಥಿ ಭಾರೀ ಮುನ್ನಡೆಯಿಂದ ಗೆಲುವಿನ ಜಯಭೇರಿ ಭಾರಿಸಲಿದ್ದಾರೆ, ಬಿಜೆಪಿ 400ರ ಗಡಿ ದಾಟಲಿದೆ-ಪ್ರಭಾಕರ ಬಂಗೇರ ಪತ್ರಿಕಾಗೋಷ್ಠಿ

Suddi Udaya

ಬಾಂಗ್ಲಾದೇಶದಲ್ಲಿ ನಡೆದ ಹಿಂದೂ ಯುವಕನ ಹತ್ಯೆ ಖಂಡಿಸಿ ಉಜಿರೆಯಲ್ಲಿ ವಿ.ಹಿಂ.ಪ. ಪ್ರತಿಭಟನೆ

Suddi Udaya
error: Content is protected !!