ಉಪ್ಪಿನಂಗಡಿ: ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಸುನೀಲ್ ಕುಮಾರ್ ದಡ್ಡು ಹಾಗೂ ಉಪಾಧ್ಯಕ್ಷರಾಗಿ ದಯಾನಂದ ಸರೋಳಿ ಆಯ್ಕೆಯಾಗಿದ್ದಾರೆ.
ಸುನೀಲ್ ಕುಮಾರ್ ಅವರು ಈ ಹಿಂದೆ ಸಂಘದ ಉಪಾಧ್ಯಕ್ಷರಾಗಿ ಹಾಗೂ ದಯಾನಂದ ಸರೋಳಿ ಅವರು ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
![](https://suddiudaya.com/wp-content/uploads/2025/02/upii.jpg)
ನಿರ್ದೇಶಕರುಗಳಾಗಿ ವಸಂತ ಪಿ., ಶ್ರೀರಾಮ, ಸದಾನಂದ ಶೆಟ್ಟಿ ಜಿ., ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಷಾ, ಸಂಧ್ಯಾ, , ಸುಂದರ ಕೆ., ರಾಘವ ನಾಯ್ಕ, ರಾಜೇಶ್ ಆಯ್ಕೆಯಾಗಿದ್ದಾರೆ.
ಈವೇಳೆ ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ನೂತನ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.