ಉಜಿರೆ: ಬದುಕು ಕಟ್ಟೋಣ ಬನ್ನಿ ತಂಡದ ವತಿಯಿಂದ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೆಳಾಲು ಅನಂತೋಡಿಯಲ್ಲಿ ನಾಲ್ಕೂವರೆ ಎಕರೆ ಗದ್ದೆಯಲ್ಲಿ 1000 ಕ್ಕೂ ಹೆಚ್ಚು ಯುವ ಜನತೆಯಿಂದ ಏಕಕಾಲದಲ್ಲಿ ಭತ್ತದ ನಾಟಿ ಮಾಡಿದ ಕಾರ್ಯಕ್ರಮ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ.
![](https://suddiudaya.com/wp-content/uploads/2025/02/mohan-kumar.jpg)
ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಘಟನೆಯೊಂದು ಸಮಾಜಮುಖಿಯಾಗಿ, ಬಡವರ ಪಾಲಿನ ಬೆಳಕಾಗಿ, ಪ್ರವಾಹದ ಸಮಯದಲ್ಲಿ ಮನೆ ಕಳೆದುಕೊಂಡ ವ್ಯಕ್ತಿಗಳಿಗೆ ಮನೆ ಹಾಗೂ ಕೃಷಿ ಪುನರ್ ನಿರ್ಮಾಣ, ಸರಕಾರಿ ಶಾಲೆಯ ಮೂಲಭೂತ ಸೌಕರ್ಯದ ಅಭಿವೃದ್ಧಿ, ಭತ್ತದ ಬೆಳೆ ಬೆಳೆಯುವಲ್ಲಿ ಜಾಗೃತಿ, ಆರ್ಥಿಕವಾಗಿ ಹಿಂದುಳಿದ ಕ್ರೀಡಾ ಪಟುಗಳಿಗೆ ಆಧುನಿಕ ಸೌಲಭ್ಯ ಸೇರಿದಂತೆ ಎಲ್ಲಾ ವಿಧದ ನೆರವು ನೀಡುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು, ಡಿ.ಹರ್ಷೇಂದ್ರ ಕುಮಾರ್ ಅವರ ಪ್ರೇರಣೆಯಿಂದ ನಮ್ಮ ಬದುಕು ಕಟ್ಟೋಣ ಬನ್ನಿ ತಂಡ ಸಮಾಜಮುಖಿ ಕೆಲಸ ನಿರ್ವಹಿಸುತ್ತಿದೆ. ಪ್ರಶಸ್ತಿ ಸನ್ಮಾನಗಳು ಕಾರ್ಯಕರ್ತರಿಗೆ ಸಂದ ಗೌರವವಾಗಿದೆ ಎಂದು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ತಿಳಿಸಿದರು.