July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ರತ್ನಮಾನಸ ಜೀವನ ಶಿಕ್ಷಣ ವಸತಿ ನಿಲಯದಲ್ಲಿ ಭೂಮಿ ಹುಣ್ಣಿಮೆ ಆಚರಣೆ

ಉಜಿರೆ: ರತ್ನಮಾನಸ ಜೀವನ ಶಿಕ್ಷಣ ವಸತಿ ನಿಲಯದಲ್ಲಿ ಭೂಮಿ ಹುಣ್ಣಿಮೆಯನ್ನು ಫೆ.12 ರಂದು ಆಚರಿಸಲಾಯಿತು.
ಶ್ರೀ .ಧ .ಮ. ಪದವಿ ಕಾಲೇಜಿನ ಸಂಸ್ಕೃತ ಮುಖ್ಯಸ್ಥರಾದ ಶ್ರೀಧರ್ ಭಟ್ ರವರು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತ ಭೂಮಿಯು ನಮ್ಮ ಬದುಕಿಗೆ ಆಧಾರವಾಗಿದೆ. ಗಿಡಮರಗಳು ಬೆಳೆಯಲು ಮತ್ತು ಒಳ್ಳೆಯ ಫಲವನ್ನು ನೀಡಲು ಮಣ್ಣು ಬೇಕು ಈ ಭೂಮಿ ಹುಣ್ಣಿಮೆಯಂದು ಭೂಮಿ ತಾಯಿ ಪೂಜೆಯನ್ನು ಹಿಂದಿನಿಂದಲೂ ಮಾಡುತ್ತಾ ಬಂದಿರುತ್ತಾರೆ . ಇಂದಿನಿಂದ ಭೂಮಿ ತಾಯಿ ಫಲವತ್ತತೆಗೆ ತಯಾರಾಗಿದ್ದಾಳೆ ಎಂಬ ಮಾತಿದೆ . ಈ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರತ್ನಮಾನಸ ವಸತಿ ನಿಲಯದ ಪಾಲಕರಾದ ಯತೀಶ್ ಕೆ ಬಳಂಜ ಮಾತನಾಡುತ್ತಾ ಈ ದಿನ ಭೂಮಿ ತಾಯಿ ರುತುಮತಿ ಆಗುವ ದಿನ. ಈ ದಿನ ಭೂಮಿಗೆ ಯಾವುದೇ ತೊಂದರೆ ಆಗುವ ಕೆಲಸ ಮಾಡಬಾರದು ಎಂದು ಹೇಳುತ್ತಾರೆ . ಈ ದಿನ ಭೂಮಿ ತಾಯಿಗೆ ನಮಸ್ಕರಿಸಿ ಕ್ಷಮೆಯನ್ನು ಕೇಳಬೇಕು ಎಂದು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರತ್ನಮಾನಸದ ಎದುರುಗಡೆ ಸೆಗಣಿ ಸಾರಿಸಿ ಭೂಮಿಗೆ ಎಣ್ಣೆ ಹೊಯ್ದು ಕುಂಕುಮ, ಧೂಪ, ದೀಪ ಇಟ್ಟು ಹಾಗೂ ಅಕ್ಕಿ ಮತ್ತು ಹುರುಳಿಯಿಂದ ಮಾಡಲಾದ ಪುಡಿ ( ನನ್ನರಿ) ಮತ್ತು ಗೋಳಿ ಎಲೆಯಿಂದ ಮಾಡಲಾದ ಕಡಬುವನ್ನಿಟ್ಟು ಭೂಮಿತಾಯಿನ್ನು ಪೂಜಿಸಲಾಯಿತು.

Related posts

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಕೃಷಿ ಪಂಪುಗಳ ಸ್ಥಾವರಗಳಿಗೆ ಆಧಾರ್ ಜೋಡಣೆ ಹಿನ್ನಲೆ ಸರಕಾರಿ ರಜಾ ದಿನವಾದ ಆ.24,25 ರಂದು ಬೆಳ್ತಂಗಡಿ ಮೆಸ್ಕಾಂ ಕಛೇರಿ ಕಾರ್ಯನಿರ್ವಹಿಸಲಿದೆ

Suddi Udaya

ವಾಣಿ ಸೌಹಾರ್ದಕೋ ಆಪರೇಟಿವ್ ಸೊಸೈಟಿ ಮಹಾಸಭೆ

Suddi Udaya

ಚರ್ಚಾ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಪ್ರಣಾಮ್ ಪೂಜಾರಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಕೊಲ್ಪಾಡಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ

Suddi Udaya

ಉರುವಾಲು : ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ-ಸಮಾಲೋಚನಾ ಸಭೆ

Suddi Udaya
error: Content is protected !!