ಬೆಳ್ತಂಗಡಿ : ಹಲವು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಮೊಬೈಲ್ ಮತ್ತು ವಾಚ್ ಮಾರಾಟದಲ್ಲಿ ಹೆಸರುವಾಸಿಯಾದಂತಹ ಬಿ.ಎ ಮೊಬೈಲ್ ಮತ್ತು ವಾಚ್ ಹೊಸ ಮಳಿಗೆ ಫೆ.12 ರಂದು ಬೆಳ್ತಂಗಡಿ ಮುಖ್ಯ ರಸ್ತೆಯ ಪಿಂಟೋ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.
![](https://suddiudaya.com/wp-content/uploads/2025/02/ba.jpg)
ಬೆಳ್ತಂಗಡಿ ದಾರುಸ್ಸಲಾಂ ಸಂಸ್ಥೆಯ ಮುಖ್ಯಸ್ಥರಾದ ಜೆಫ್ರಿ ತ್ವಾಹಾ ತಂಙಳ್ ರವರು ಹೊಸ ಮಳಿಗೆ ಉದ್ಘಾಟಿಸಿದರು. ಗಣೇಶ್ ಐತಾಳ್ ರವರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ಹೋರಾಟಗಾರ ಅಕ್ಬರ್ ಬೆಳ್ತಂಗಡಿ, ಪಟ್ಟಣ ಪಂಚಾಯತ್ ಸದಸ್ಯರಾದ ಜನಾರ್ದನ, ಹಿರಿಯರಾದ ಬಿ.ಎಮ್ ಉಮರ್ ಕುಂಞ ಮುಸ್ಲಿಯಾರ್, ರಶೀದ್ ಬೆಳ್ತಂಗಡಿ, ಅನ್ಸಿಪ್ ಕೋಲ್ಪೆ ಆಗಮಿಸಿದ್ದರು. ಮಳಿಗೆ ಮಾಲಕರಾದ ಬಿ.ಎ ಮೈದೀನ್ ರವರು ಅತಿಥಿಗಳನ್ನು ಸ್ವಾಗತಿಸಿ, ಸ್ಮರಣೆ ನೀಡಿದರು.