22.6 C
ಪುತ್ತೂರು, ಬೆಳ್ತಂಗಡಿ
July 23, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ವರದಿ

ವೇಣೂರು: ಪೋಕ್ಸೋ ಪಕ್ರರಣ, ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ

ವೇಣೂರು: ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣದ ಆರೋಪಿ ಬಂಟ್ವಾಳ ಸಜಿಪನಡು ನಿವಾಸಿ ಜುಮಾರ್ ಎಂಬಾತನಿಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 1 ವರ್ಷ ಕಾರಾಗೃಹ ಹಾಗೂ 10 ಸಾವೀರ ರೂ.ದಂಡ ವಿಧಿಸಿ . ಫೆ.11 ರಂದು ಆದೇಶ ನೀಡಿದೆ.

ಪ್ರಕರಣ ವಿವರ: ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ನೆರೆಯ ಸಂಬಂಧಿಯೊಂದಿಗೆ ಗೋಳಿಯಂಗಡಿಯ ಐ.ಟಿ.ಐಗೆ ಹೋಗುತ್ತಿರುವ ಸಮಯ ಆರೋಪಿತ ದಿನಾಲೂ ಹಿಂಬಾಲಿಸಿಕೊಂಡು ಬರುತ್ತಿದ್ದುದಲ್ಲದೆ , ಬೈಕ್‌ ನಿಲ್ಲಿಸಿ ಬೈಕ್‌ ನಲ್ಲಿ ಬರುತ್ತೀರಾ, ನಿಮ್ಮ ಪೋನು ನಂಬ್ರ ಕೊಡಿ ಎಂದು ಕೇಳುತ್ತಿದ್ದು 2024 ಅ. 15 ರಂದು ಬೆಳಿಗ್ಗೆ ಸುಮಾರು 7.45 ಗಂಟೆಗೆ ಎಂದಿನಂತೆ ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ಸಂಬಂಧಿ ಯೊಂದಿಗೆ ಐಟಿಐಗೆ ನಡೆದುಕೊಂಡು ಹೋಗುವ ಸಮಯ ಕುಕ್ಕೇಡಿ ಗ್ರಾಮದ ಪುಲ್ಲಾಯಿ ಎಂಬಲ್ಲಿ ಆರೋಪಿತ ಜುಮಾರ್, ಅತನ ಬೈಕ್‌ ನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋಗಿ ವಾಪಾಸು ಹಿಂದಕ್ಕೆ ತಿರುಗಿಸಿಕೊಂಡು ಬಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದು,ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಅ.ಕ್ರ: 77/2024 ಕಲಂ: 78 BNS-2023 ಮತ್ತು:ಕಲಂ;12 ಪೋಕ್ಸೋ ಕಾಯಿದೆ- 2012 ರಂತೆ ಪ್ರಕರಣ ದಾಖಲಾಗಿತ್ತು.


ಸದ್ರಿ ಪ್ರಕರಣದ ತನಿಖೆಯನ್ನು ನಡೆಸಿದ ವೇಣೂರು ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ಶ್ರೀಶೈಲ ಡಿ. ಮುರಗೋಡ್‌ರವರು ಜುಮಾರ್‌ ನನ್ನು ದಸ್ತಗಿರಿ ಪಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪ್ರಕರಣಕ್ಕೆ ಸಂಬಂದಿಸಿದ ಪೂರಕ ಸಾಕ್ಷಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಆರೋಪಿತನ ವಿರುದ್ದ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಸದ್ರಿ ಪ್ರಕರಣದಲ್ಲಿ ಒಟ್ಟು18 ಸಾಕ್ಷಿಧಾರರನ್ನು ಹೊಂದಿದ್ದು,
ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ವೆಂಕಟೇಶ್‌ ಎ ಎಸ್‌ ಐ ವೇಣೂರು ಠಾಣೆ, ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಸಮನ್ಸ್‌ಗಳನ್ನು ಪಿಸಿ ಈರಾ ನಾಯ್ಕ್‌ರವರು, ಸೆಷನ್ಸ್ ನ್ಯಾಯಾಲಯದ ಕರ್ತವ್ಯವನ್ನು ಕಾಲವ್ ರವರು ನಿವ೯ಹಿಸಿದರು. ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಸಹನಾ ದೇವಿ ರವರು ವಾದಿಸಿರುತ್ತಾರೆ.

Related posts

ಮಡಂತ್ಯಾರು; ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಬಹುಮಾನ ವಿತರಣಾ ಕಾರ್ಯಕ್ರಮ

Suddi Udaya

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಜಿನಮಂದಿರದಲ್ಲಿ ಭಗವಾನ್ ವರ್ಧಮಾನ ಸ್ವಾಮಿಯ ಮೋಕ್ಷ ಕಲ್ಯಾಣೋತ್ಸವ

Suddi Udaya

ಕೊಕ್ಕಡ: ರಿಕ್ಷಾ ಚಾಲಕ ನೇಣುಬಿಗಿದು ಆತ್ಮಹತ್ಯೆ

Suddi Udaya

ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ:ಸೌತಡ್ಕ ದಿವ್ಯಾಂಗರ ಪುನಶ್ಚೇತನ ಕೇಂದ್ರದಿಂದ ಹತ್ತಿಯಿಂದ ಬತ್ತಿ ಮಾಡುವ ಯಂತ್ರ ವಿತರಣೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶ್ರೀ ಗುರು ಪೂಜೋತ್ಸವ: ಸರ್ವೇಶ್ವರೀ ದೇವಿಯ ಪೂಜೆಯಲ್ಲಿ ನೂರಾರು ಮಹಿಳಾ ವೃತಧಾರಿಗಳು ಭಾಗಿ, ಸಾಧಕರಿಗೆ ಸನ್ಮಾನ,

Suddi Udaya

ಶಿಬಾಜೆ ದಲಿತ ಯುವಕ ಶ್ರೀಧರ ಕೊಲೆ ಪ್ರಕರಣ: ಎಸ್‌ಐಟಿ ನಿಷ್ಪಕ್ಷಫಾತ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು: ಪತ್ರಿಕಾ ಗೋಷ್ಠಿಯಲ್ಲಿ ಬಿ.ಕೆ ವಸಂತ್

Suddi Udaya
error: Content is protected !!