ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿ ಶ್ರೀ ಮಾತೇ ದೇಯಿ ಬೈದೇದಿ ಕೋಟಿ ಚೆನ್ನಯ ಮೂಲಸ್ಥಾನದ ಧರ್ಮ ಚಾವಡಿಯ ಪೂರ್ವದ ಪ್ರಧಾನ ದ್ವಾರ ಹಾಗೂ ಬಾಗಿಲು, ಉತ್ತರದ ದಾರಂದ ಬಾಗಿಲು ಮತ್ತು ಧೂಮಾವತಿ, ಕುಪ್ಪೆಟ್ಟು ಪಂಜುರ್ಲಿ, ಕೋಟಿ ಚೆನ್ನಯ್ಯ ಮಣೆ ಮಂಚವು ಹಾಗೂ ಅಳದಂಗಡಿ ಶ್ರೀ ಗಣಪತಿ ದೇವಸ್ಥಾನಕ್ಕೆ ಪೂರ್ವದ ಪ್ರಧಾನ ಬಾಗಿಲು, ಉತ್ತರದ ಬಾಗಿಲು, ತೀರ್ಥ ಮಂಟಪದ ಬಾಗಿಲು, ಗರ್ಭ ಗುಡಿಯ ಬಾಗಿಲುಗಳನ್ನು ನೀಡಿದ ಬಿರ್ವ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಗೆಜ್ಜೆಗಿರಿ
ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀಮತಿ ವೀರಮ್ಮ ಸಂಜೀವ ಸಾಲಿಯನ್ ಮತ್ತು ಮಕ್ಕಳು “ಸನ್ನಿಧಿ” ಪ್ಯಾಲೇಸ್ ಡೊಂಕುಬೆಟ್ಟು ನಾರಾವಿ ಇವರು ವೇಣೂರು ಮುಡುಕೋಡಿ ದೈಪಾಲಬೆಟ್ಟು ಇಲ್ಲಿಗೆ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಮುಖಾಯಾಮ ಮಂಟಪ ದುರಸ್ತಿಗೆ ಮರಮಟ್ಟು ಹಾಗೂ ಭಂಡಾರಕ್ಕೆ ಪಲ್ಲಕ್ಕಿಯನ್ನು ಸೇವೆ ರೂಪದಲ್ಲಿ ಸಮರ್ಪಸಿದ್ದಾರೆ.