25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ:ಎಕ್ಸೆಲ್ ನಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಬಗ್ಗೆ ಶಿಕ್ಷಣ ತಜ್ಞರಿಂದ ಕಾರ್ಯಾಗಾರ

ಗುರುವಾಯನಕೆರೆ: ನೀಟ್, ಜೆ ಇ ಇ , ಸಿ ಇ ಟಿ ಸೇರಿ ವಿವಿಧ ಸ್ಪರ್ಧಾತ್ಮಕ ಹಾಗೂ ಬೋರ್ಡ್ ಪರೀಕ್ಷೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನನ್ಯ ಸ್ಥಾನ ಗಳಿಸಿಕೊಂಡ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಉಪಯುಕ್ತವಾಗುವ ಕಾರ್ಯಾಗಾರ ನಡೆಯಲಿದೆ ಎಂದು ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ತಿಳಿಸಿದರು.

ಹೆಸರಾಂತ ಶಿಕ್ಷಣ ತಜ್ಞರು ಹಾಗೂ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ ಗಂಟೆ 9 ಕ್ಕೆ ದಾಖಲಾತಿ, 9.30 ಕ್ಕೆ ಉಪಾಹಾರ ,10 ಗಂಟೆಗೆ ಉದ್ಘಾಟನೆ ನಡೆದು, ಕಾರ್ಯಾಗಾರ ಸಂಪನ್ನಗೊಳ್ಳಲಿದೆ.

ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕಕ್ಕಿಂಜೆ, ಬಿಸಿರೋಡ್, ವೇಣೂರು ಹಾಗೂ ಉಪ್ಪಿನಂಗಡಿ ಯಿಂದ ಕಾರ್ಯಾಗಾರಕ್ಕೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಉಚಿತ ಬಸ್ ಸಂಚಾರದ ವ್ಯವಸ್ಥೆ ಇದೆ.

ಕಾರ್ಯಾಗಾರದಲ್ಲಿ ಪಾಲ್ಗೊಲು ಆಸಕ್ತರಾದ 10 ನೆಯ ತರಗತಿಯ ವಿದ್ಯಾರ್ಥಿಗಳು ಹಾಗೂ ಹತ್ತನೆಯ ತರಗತಿ ವಿದ್ಯಾರ್ಥಿಗಳ ಹೆತ್ತವರು 9902369252 ಅಥವಾ 9743396842 ಸಂಪರ್ಕಿಸಬಹುದು ಎಂದರು.

Related posts

ಬೆಳ್ತಂಗಡಿ: ಮ್ಯಾಟ್ರಿಕ್ಸ್ ಹೋಂಡಾ ಬಳಿ ಮರ ಬಿದ್ದು ಹಾನಿ

Suddi Udaya

ಜ. 20 ರಂದು ನಡೆಯಲಿರುವ ಗಮಕ ಸಮ್ಮೇಳನ ಶಾಸಕರಿಗೆ ಆಹ್ವಾನ

Suddi Udaya

ಎ.10-19: ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ “ಚಿಲಿಪಿಲಿ”

Suddi Udaya

ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಶ್ರೀ ಕಾಲಬೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಇಂದಬೆಟ್ಟು ಶಾಖೆಯ ಉದ್ಘಾಟನೆ

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ಉಜಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮ

Suddi Udaya

ಮಲೆಬೆಟ್ಟು ಶ್ರೀ ವನದುರ್ಗಾ ದೇವಾಲಯದ ನಾಗಬನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya
error: Content is protected !!