36.4 C
ಪುತ್ತೂರು, ಬೆಳ್ತಂಗಡಿ
February 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿಬೆಳ್ತಂಗಡಿ

ನವ ವಿವಾಹಿತ, ಕಂಪನಿ ಉದ್ಯೋಗಿ, ನಾಲ್ಕೂರಿನ ಯುವಕ ಮೈಸೂರಲ್ಲಿ ಆತ್ಮಹತ್ಯೆ

ಬಳಂಜ: ನವ ವಿವಾಹಿತ, ಮೈಸೂರಿನ ಕಂಪೆನಿಯೊಂದರಲ್ಲಿ ಟೆಕ್ನಿಕಲ್ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕಿರಣ್ (35 ವರ್ಷ) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.13 ರಂದು ಮೈಸೂರಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬಳಂಜ‌ ಗ್ರಾ.ಪಂ ವ್ಯಾಪ್ತಿಯ ನಾಲ್ಕೂರು ಗ್ರಾಮದ ಮಜಲಡ್ಡ ನಿವಾಸಿಯಾಗಿರುವ ಕರಿಯ ಪೂಜಾರಿಯವರ ಪುತ್ರ ಕಿರಣ್ ಅವರು ಕಳೆದ 12 ವರ್ಷಗಳಿಂದ ಮೈಸೂರಿನ ಖಾಸಾಗಿ ಕಂಪನಿಯೊಂದರಲ್ಲಿ ಟೆಕ್ನಿಕಲ್ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಮೂರೂವರೆ ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಮೃದು ಹಾಗೂ ಸಾಧು ಸ್ವಭಾವದ ವ್ಯಕ್ತಿತ್ವವನ್ನು ಹೊಂದಿರುವ ಇವರು, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಹಾಗೂ ಯುವಶಕ್ತಿ ಫ್ರೆಂಡ್ಸ್ ಇದರ ಸದಸ್ಯರಾಗಿದ್ದರು.

ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೋಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ. ಈ ಸಂಬಂಧ ಮೈಸೂರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಮೃತರು ತಂದೆ ಕರಿಯ ಪೂಜಾರಿ, ತಾಯಿ ಭಾರತಿ, ಪತ್ನಿ ಅನುಪ್ರಿಯ, ಸಹೋದರ ರಂಜಿತ್ ಪೂಜಾರಿ, ಸಹೋದರಿ ಗುಣವತಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಗುರುವಾಯನಕೆರೆ: ಶಕ್ತಿನಗರದಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ಹರಿದ ನೀರು

Suddi Udaya

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ.229.55 ಕೋಟಿ ವ್ಯವಹಾರ-ರೂ.82.10 ಲಕ್ಷ ಲಾಭ- ಶೇ 10.50 ಡಿವಿಡೆಂಡ್

Suddi Udaya

ಪುದುವೆಟ್ಟು: ಮಿಯಾರು ನಿವಾಸಿ ಶೇಖರ್ ಗೌಡ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಮೇ 9 ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದ ಪಡೆದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್

Suddi Udaya

ರೈತರಿಗೆ ಬೆಳೆ ವಿಮೆ ಪಾವತಿಸಲು ಜು.31 ಅಂತಿಮ ದಿನ

Suddi Udaya
error: Content is protected !!