ಅರಸಿನಮಕ್ಕಿ : ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ.8ರಂದು ನಡೆದ ಚುನಾವಣೆಯಲ್ಲಿ ತಡೆ ಹಿಡಿಯಲಾದ ಫಲಿತಾಂಶದ ಬಗ್ಗೆ ಹೈಕೋರ್ಟುನ ಅಂತಿಮ ತೀರ್ಪು ಪ್ರಕಟಗೊಂಡಿದ್ದು, ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ 11 ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದರು, ಆದರೆ ಸಹಕಾರಿ ಸಂಘದ 2 ಮಹಾಸಭೆಗೆ ಗೈರು ಹಾಜರಾದ ಸಂಘದ ಸದಸ್ಯರಿಗೆ ಸಹಕಾರಿ ಸಂಘದ ನಿಯಮದಂತೆ ಸಂಘದ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಇಲ್ಲ. ಈ ಹಿನ್ನಲೆಯಲ್ಲಿ ಮತದಾನದ ಅವಕಾಶ ಕಳೆದುಕೊಂಡ ಸಂಘದ ಸದಸ್ಯರು ಬೆಂಗಳೂರು ಉಚ್ಚನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್‌ಪಿಟಿಷನ್ ಇದ್ದುದರಿಂದ ಚುನಾವಣಾಧಿಕಾರಿಗಳು ಸಹಕಾರಿ ಸಂಘದ ಚುನಾವಣೆಯ ಫಲಿತಾಂಶವನ್ನು ಘೋಷಣೆ ಮಾಡದೆ ತಡೆ ಹಿಡಿದಿದ್ದರು.
ಇದೀಗ ಹೈಕೋರ್ಟು ಅಂತಿಮ ಆದೇಶವನ್ನು ಮಾಡಿದ್ದು, ಇದರಿಂದಾಗಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ನಿರ್ದೇಶಕರು ಚುನಾಯಿತರಾಗಿದ್ದಾರೆ ಎಂದು ಕೋರ್ಟ್ ಆದೇಶ ನೀಡಿದೆ.
ನಿರ್ದೆಶಕರಾಗಿ ಆಯ್ಕೆಯಾದವರು : ರಾಘವೇಂದ್ರ ನಾಯಕ್ , ಕೊರಗಪ್ಪ ಗೌಡ, ರತೀಶ್ ಬಿ, ರಾಜು ಕೆ., ವರದಶಂಕರ ದಾಮ್ಲೆ, ಧರ್ಮರಾಜ್ ಎ, ಶ್ರೀಮತಿ ಗಂಗಾವತಿ, ಶ್ರೀಮತಿ ತಾರಾ, ಶ್ರೀಮತಿ ಬೇಬಿ, ನಾಗೇಶ್ ಟಿ. ಬೇಬಿ ಕಿರಣ್, ಕೃಷ್ಣಪ್ಪ ಗೌಡ