ಪುತ್ತೂರು : ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳ ವ್ಯಾಪ್ತಿ ಹೊಂದಿರುವ ಪುತ್ತೂರು ಉಪ ವಿಭಾಗಕ್ಕೆ ನೂತನ ಸಹಾಯಕ ಆಯುಕ್ತರಾಗಿ ಸ್ಟೆಲ್ಲಾ ವರ್ಗೀಸ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.ಮುಂದಿನ ಕೆಲವೇ ದಿನಗಳಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ಪ್ರಸ್ತುತ ಉತ್ತರ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಟೆಲ್ಲಾ ವರ್ಗೀಸ್ ಅವರನ್ನು ಪುತ್ತೂರು ಎ.ಸಿ.ಯಾಗಿ ವರ್ಗಾಯಿಸಲಾಗಿದೆ. 13 ತಿಂಗಳ ಕಾಲ ಪುತ್ತೂರಿನಲ್ಲಿ ಎ.ಸಿ.ಯಾಗಿದ್ದ ಐಎಎಸ್ ಅಧಿಕಾರಿ ಜುಬಿನ್ ಮೊಹಾಪಾತ್ರ ಅವರು ಇತ್ತೀಚೆಗೆ ರಾಯಚೂರು ಮಹಾನಗರಪಾಲಿಕೆ ಆಯುಕ್ತರಾಗಿ ‘ಬಡ್ತಿಗೊಂಡಿದ್ದರು. ಇದಾದ ಬಳಿಕ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿಯಾಗಿರುವ ಶ್ರವಣ್ ಕುಮಾರ್ ಅವರು ಪುತ್ತೂರಿನ ಪ್ರಭಾರ ಎ.ಸಿ.ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂಲತ ಕಲಬುರ್ಗಿಯವರಾದ ಸ್ಟೆಲ್ಲಾ ವರ್ಗೀಸ್ ರವರು ಬಿಎಸ್ ಸಿ ಪದವಿಧರೆಯಾಗಿದ್ದಾರೆ.