20.6 C
ಪುತ್ತೂರು, ಬೆಳ್ತಂಗಡಿ
February 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಪಿ.ಎಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ ಹಾಗೂ ಬೆಂಕಿ ಇಲ್ಲದ ಅಡುಗೆ ಕಾರ್ಯಕ್ರಮ

ಬೆಳ್ತಂಗಡಿ : ಇಲ್ಲಿಯ ಪಿ.ಎಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ವಿದ್ಯಾರ್ಥಿಗಳಲ್ಲಿ ಗಣಿತದ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಮೆಟ್ರಿಕ್ ಮೇಳ ಹಾಗೂ ಬೆಂಕಿ ಇಲ್ಲದ ಅಡುಗೆ ಕಾರ್ಯಕ್ರಮವನ್ನು ಫೆ.15 ರಂದು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಇದರ ಸಂಪನ್ಮೂಲ ವ್ಯಕ್ತಿಗಳಾದ ಮೋಹನ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಗಿಡಕ್ಕೆ ನೀರನ್ನ ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ಚರಣ್ ಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವಾರಿಜಾ, ಶಾಲಾ ಮುಖ್ಯ ಶಿಕ್ಷಕ ಸೂರ್ಯನಾರಾಯಣ ಪುತ್ತೂರಾಯರು, ಎಸ್.ಡಿ.ಎಮ್.ಸಿ ಸದಸ್ಯರು, ಶಾಲಾ ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು. ಗಣಿತ ಸಂಘದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ವಿದ್ಯಾಶೆಣೈರವರು ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು.

ವಿದ್ಯಾರ್ಥಿಗಳು ಮನೆಯಲ್ಲೇ ಬೆಳೆದ ನಾನಾ ಬಗೆಯ ತರಕಾರಿಗಳು, ಹಣ್ಣುಗಳು ಹಾಗೂ ವಿವಿಧ ಬಗೆಯ ಸ್ಟೇಷನರಿ ವಸ್ತುಗಳನ್ನ ಮಾರಾಟಕ್ಕೆ ಅಣಿಗೊಳಿಸಿದ್ದರು. ಇದರ ಜೊತೆಯಲ್ಲಿ ತಾವೇ ತಯಾರಿಸಿದ ಬಗೆಬಗೆಯ ತಿಂಡಿ ತಿನಿಸು, ಚುರುಮುರಿ, ಪಾನೀಯಗಳನ್ನು ಮಾರಾಟ ಮಾಡಿದರು. ಶಾಲಾ ಮಕ್ಕಳ ಜೊತೆಯಲ್ಲಿ ಪೋಷಕರು ಸಹ ಈ ವೇಳೆಯಲ್ಲಿ ಪಾಲ್ಗೊಂಡು ಮಕ್ಕಳ ವ್ಯವಹಾರ ಜ್ಞಾನ ಹೆಚ್ಚಿಸಲು ನೆರವನ್ನ ನೀಡಿದರು. ಚಿಕ್ಕ ಚಿಕ್ಕ ಮಕ್ಕಳು ವಸ್ತುಗಳನ್ನು ಖರೀದಿಸಿ ಸಂಭ್ರಮಿಸಿದರು. ಶಿಕ್ಷಕಿ ಶ್ರೀಮತಿ ಶುಭ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಅಖಿಲ್ ಕುಮಾರ್ ವಂದಿಸಿದರು.

Related posts

ಅ.20 : ಮುಂಡಾಜೆ ಅನುದಾನಿತ ಫ್ರೌಡ ಶಾಲೆಯಲ್ಲಿ ಶಾಲಾ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಸಂಭ್ರಮ

Suddi Udaya

ಉಜಿರೆ: ಆಟೋರಿಕ್ಷಾ ಜಖಂ ಆದ ವಿಚಾರದಲ್ಲಿ ಪರಿಹಾರಕ್ಕಾಗಿ ಅನುಮತಿ ಪಡೆಯದೆ ಸಾರ್ವಜನಿಕ ರಸ್ತೆಯಲ್ಲಿ ಕೂತು ವಾಹನ ಸಂಚಾರಕ್ಕೆ ತಡೆಒಡ್ಡಿ ಜನಸಂಚಾರಕ್ಕೆ ಅಡ್ಡಿ ಉಂಟುಮಾಡಿದವರ ವಿರುದ್ಧ ಪ್ರಕರಣ ದಾಖಲು

Suddi Udaya

ನಾವೂರು: ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ

Suddi Udaya

ಗುರುವಾಯನಕೆರೆ: ಶ್ರೀ ಲಕ್ಷ್ಮಿ ಫ್ಯಾನ್ಸಿಯಲ್ಲಿ ಚಪ್ಪಲ್ ಮೇಲೆ 10-50% ಡಿಸ್ಕೌಂಟ್ ಸೇಲ್

Suddi Udaya

ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರತಿಭಟನಾ ಸಭೆ; ಸಾವಿರಾರು ಮಂದಿ ಭಾಗಿ

Suddi Udaya
error: Content is protected !!