ವೇಣೂರು : ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ.ವೇಣೂರು ಶಾಖೆಯಲ್ಲಿರುವ ಪಂಚಮಿ ನವೋದಯ ಸ್ವಸಹಾಯ ಸಂಘದ ಸದಸ್ಯರಾದ ಗಿರೀಶ್, ಭ್ರಮರಾಂಭ ನವೋದಯ ಸ್ವಸಹಾಯ ಸಂಘದ ಸದಸ್ಯೆ ವಿಶಾಲ, ಫಲ್ಗುಣಿ ನವೋದಯ ಸ್ವಸಹಾಯ ಸಂಘದ ಸದಸ್ಯೆ ಪಲ್ಲವಿ, ಲಕ್ಷ್ಮಿಜ್ಯೋತಿ ನವೋದಯ ಸಂಘದ ಸದಸ್ಯೆ ಆಸಿಯಮ್ಮ, ಹಾಗು ಸಹಕಾರ ನವೋದಯ ಸಂಘದ ಪ್ರಸಾದ್ ರವರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ)ಮಂಗಳೂರಿನಿಂದ ಮಂಜೂರಾದ ಚೈತನ್ಯ ವಿಮಾ ಒಟ್ಟು ಮೊತ್ತ ರೂ.35000/ ಚೆಕ್ ನ್ನು ನಮ್ಮ ಶಾಖೆಯ ಶಾಖಾ ವ್ಯವಸ್ಥಾಪಕರಾದ ನಿತೀಶ್ ಹೆಚ್.ಇವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರೇರಕಿಯಾದ ಶ್ರೀಮತಿ ಆಶಾಲತಾ ಹಾಗೂ ಶಾಖಾ ಸಿಬ್ಬಂದಿಗಳಾದ ಶ್ರೀಮತಿ ನೀತಾ, ಅಜಿತ್, ಶ್ರೀಮತಿ ಭಾರತಿ ಉಪಸ್ಥಿತರಿದ್ದರು.