April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ : ವಿದ್ಯಾಭ್ಯಾಸದ ಜೊತೆಗೆ ವೃತ್ತಿ ಕೌಶಲ್ಯವನ್ನು ಕಲಿತರೆ ಜೀವನ ನಡೆಸಲು ಸುಲಭ ಸಾಧ್ಯವಾಗುತ್ತದೆ. ನಾವು ಕಲಿಯುವಾಗ ವಿಷಯದ ಬಗ್ಗೆ ತಿಳಿದು, ಪ್ರಾಯೋಗಿಕವಾಗಿ ಮಾಡಿ ಅದನ್ನು ಅನುಭವಿಸಿದಾಗ ಮಾತ್ರ ಹೆಚ್ಚು ಪ್ರಯೋಜನಕಾರಿ. ಕೌಶಲ್ಯ ಇರುವಂತಹ ಜನ ಎಲ್ಲಿ ಬೇಕಾದರು ಬದುಕಬಲ್ಲರು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸಹ ಕೌಶಲ್ಯ ಇರುತ್ತದೆ ಅದರ ಅರಿವು ಮತ್ತು ಉಪಯೋಗ ಮಾಡಿಕೊಳ್ಳಬೇಕು. ಜೀವನದಲ್ಲಿ ಎರಡು ಕಿಂಗ್ (Smoking, Driking) ಗಳಿಂದ ಮತ್ತು ಒಂದು ಕ್ವೀನ್ (Mobil Phone)ನಿಂದ ದೂರ ಇದ್ದರೆ ಯಶಸ್ಸು ಆಗುತ್ತಾರೆ. ಇದಕ್ಕೆ ನಮ್ಮಲ್ಲಿ ಬದ್ದತೆ, ಕಠಿಣ ಪರಿಶ್ರಮ, ಶಿಸ್ತು, ನೈತಿಕತೆ ಇಟ್ಟುಕೊಂಡು ವೃತ್ತಿಯನ್ನು ನಡೆಸಿ. ಪ್ರತಿಯೋಬ್ಬರು ಕೌಶಲ್ಯವಂತರಾಗಬೇಕು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ದೂರದರ್ಶೀತ್ವದ ಈ ರುಡ್ ಸೆಟ್ ಸಂಸ್ಥೆ ಲಕ್ಷಾಂತರ ಯುವಜನರಿಗೆ ಕೌಶಲ್ಯ ನೀಡಿದೆ ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಯಶಸ್ವಿಯಾಗಿ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿಯುತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅಭಿಪ್ರಾಯ ಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ಸ್ವ ಉದ್ಯೋಗ ನಮ್ಮ ಹೆಮ್ಮೆಯ ವೃತ್ತಿಯಾಗಬೇಕು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ಮಾತನಾಡಿ ನಿಮ್ಮ ವ್ಯವಹಾರಗಳನ್ನು ಬ್ಯಾಂಕಿನ ಮೂಲಕವೇ ನಡೆಸಿ ಇದರಿಂದ ನಿಮ್ಮ ವ್ಯವಹಾರಕ್ಕೆ ಬೇಕಾದ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದು ಶುಭ ಹಾರೈಸಿದರು.


ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಅವರು ತರಬೇತಿಯ ಹಿನ್ನೋಟ ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು.


ಶಿಬಿರಾರ್ಥಿ ನಿತೇಶ್ ಅವರು ಪ್ರಾರ್ಥನೆ ನೆರವೇರಿಸಿದರು ಸಂದೀಪ್, ಪರಶುರಾಮ, ಪ್ರಥ್ವೀರಾಜ್ ತಮ್ಮ ತರಬೇತಿಯ ಅನುಭವ ಹಂಚಿಕೊಂಡರು.

Related posts

ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಮುಖರು ಆಸ್ಪತ್ರೆಗೆ ಬೇಟಿ

Suddi Udaya

ಖ್ಯಾತ ಯಕ್ಷಗಾನ ಕಲಾವಿದ ಕಿರಣ್ ಪಂಜ ನಿಧನ

Suddi Udaya

ನಾವರ ರಾಜಪಾದೆ ನಿವಾಸಿ ಹಿಲಾರಿ ಡಿ.ಸೋಜ ನಿಧನ

Suddi Udaya

ಚುನಾವಣಾ ಕಾರ್ಯಕ್ಕೆ 18 ವರ್ಷದೊಳಗಿನ ಮಕ್ಕಳ ಬಳಕೆ ನಿಷೇಧ

Suddi Udaya

ಬಳಂಜ: ಶಾರದೋತ್ಸವ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ, ಬಿಸಿಲು-ಮಳೆ ಲೆಕ್ಕಿಸದೆ ಆಟವಾಡಿದ ಯುವಕರು

Suddi Udaya

ಉರುವಾಲು : ಬೈತಾರು ಕಾರಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಸಂಭ್ರಮ

Suddi Udaya
error: Content is protected !!