April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ; ಸತತ ಮೂರನೇ ಅವಧಿಗೆ ಅಧ್ಯಕ್ಷರಾಗಿ ಉದ್ಯಮಿ, ಸಂಘಟಕ ಸುಂದರ ಹೆಗ್ಡೆ ಹಾಗೂ ಉಪಾಧ್ಯಕ್ಷರಾಗಿ ರತ್ನಾಕರ ಪೂಜಾರಿ ಅವಿರೋಧ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಎಂಟು ಗ್ರಾಮಗಳನ್ನು ಒಳಗೊಂಡ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಅಧ್ಯಕ್ಷರಾಗಿ, ಉದ್ಯಮಿ, ಸಮಾಜಸೇವಕ, ಸಂಘಟಕ ಸುಂದರ ಹೆಗ್ಡೆ ಬಿಇ ಹಾಗೂ ಉಪಾಧ್ಯಕ್ಷರಾಗಿ ರತ್ನಾಕರ ಪೂಜಾರಿ ಬರ್ಕಜೆ ಫೆ.19 ರಂದು ಅವಿರೋಧವಾಗಿ ಆಯ್ಕೆಯಾದರು.

ನಿರ್ದೇಶಕರುಗಳಾದ ರಾಮದಾಸ ನಾಯಕ್, ಸಂದೀಪ್ ಹೆಗ್ಡೆ, ಸಂತೋಷ್ ಜೈನ್, ಪ್ರವೀಣ್ ಪರಿಯೊಟ್ಟು,ಪ್ರಶಾಂತ್ ಪೂಜಾರಿ, ಕೃಷ್ಣಪ್ಪ ಮೂಲ್ಯ, ರಾಜು ನಾಯ್ಕ್, ನಾಗಪ್ಪ, ಆಶಾ ಸುಂದರ, ರೋಹಿನಿ ಪ್ರಕಾಶ್ ಉಪಸ್ಥಿತರಿದ್ದರು.

ಎಂಟು ಗ್ರಾಮ ವ್ಯಾಪ್ತಿಯ ಸೊಸೈಟಿ ವೇಣೂರು, ಮೂಡುಕೋಡಿ, ಕರಿಮಣೇಲು, ನಿಟ್ಟಡೆ, ಕುಕ್ಕೇಡಿ, ಅಂಡಿಂಜೆ, ಬಜಿರೆ ಹಾಗೂ ಗುಂಡೂರಿ ಗ್ರಾಮಗಳ ವ್ಯಾಪ್ತಿಗೆ ಒಳಗೊಂಡಿರುವ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 2024-25ರಿಂದ 2029-30ರವರೆಗಿನ ಅವಧಿಗೆ ಜ.12 ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ 12 ಮಂದಿ ಸದಸ್ಯರು ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಪ್ರತಿಮಾ ಚುನಾವಣಾ ಪ್ರಕ್ರಿಯೆ ನಡೆಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ್ ಪೂಜಾರಿ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

ಭಾರತೀಯ ಜನತಾ ಪಾರ್ಟಿಯಿಂದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು.ಜಯಂತ್ ಕೋಟ್ಯಾನ್ ಸೇರಿದಂತೆ ಬಿಜೆಪಿಯ ಪ್ರಮುಖರು ಉಪಸ್ಥಿತರಿದ್ದರು.

Related posts

ನ.22: ಗೆಜ್ಜೆಗಿರಿಯಲ್ಲಿ ಮೂರನೇ ವರ್ಷದ ಗೆಜ್ಜೆನಾದದ ವೈಭವ

Suddi Udaya

ತಾಲೂಕು ಪ್ರೌಢಶಾಲಾ ಕಬಡ್ಡಿ ಬೆಳಾಲು ಎಸ್ ಡಿ ಎಂ ಶಾಲಾ ತಂಡ ಪ್ರಥಮ

Suddi Udaya

ಮಗುವಿಗೊಂದು ಮರ ಯೋಜನೆಗೆ ಮುಂದಾದ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆ

Suddi Udaya

ಆ.14: ಕಳೆಂಜ ವಿ.ಹಿಂ.ಪ. ಬಜರಂಗದಳ ಗ್ರಾಮ ಸಮಿತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ ಮತ್ತು ಧ್ವಜಾರೋಹಣ

Suddi Udaya

ಎ.8-17: ಶ್ರೀ ಕ್ಷೇತ್ರ ಓಡೀಲುಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya
error: Content is protected !!