September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

ಮುಂಡಾಜೆ: ಮುಂಡಾಜೆ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷ ಗಣೇಶ್ ಬಂಗೇರ ರವರ ಅಧ್ಯಕ್ಷತೆಯಲ್ಲಿ ಫೆ.19ರಂದು ಪಂಚಾಯತ್ ಸಭಾಭವನದಲ್ಲಿ ಜರುಗಿತು.

ಮಾರ್ಗದರ್ಶಕ ಅಧಿಕಾರಿಯಾಗಿ ಪಶು ಸಂಗೋಪನೆ ಇಲಾಖೆಯ ಡಾ. ಯತೀಶ್ ಕುಮಾರ್ ಕೆ.ಎಸ್. ರವರು ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.

ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಮಲತಾ, ಪಂಚಾಯತ್‌ ಸದಸ್ಯರುಗಳಾದ ಜಗದೀಶ, ರಿಶಾ ಪಟವರ್ಧನ್, ಶ್ರೀಮತಿ ಅಶ್ವಿನಿ, ರವಿಚಂದ್ರ, ಎ. ರಾಮಣ್ಣ ಶೆಟ್ಟಿ, ವಿಮಲ ಎಚ್.ಎಸ್, ವಿಶ್ವನಾಥ ಶೆಟ್ಟಿ, ರಂಜನಿ ಎಂ.ಎಲ್, ಯಶೋಧ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಾಯತ್ರಿ ಅನುಪಾಲನಾ ವರದಿ, ವಾರ್ಡ್ ಸಭೆಯ ಬೇಡಿಕೆಗಳನ್ನು ವಾಚಿಸಿದರು. ಪಂಚಾಯತ್ ಸದಸ್ಯೆ ಶ್ರೀಮತಿ ರಂಜಿನಿ ಸ್ವಾಗತಿಸಿದರು.

Related posts

ಕುತ್ಲೂರು ಸ.ಉ. ಪ್ರಾಥಮಿಕ ಶಾಲೆಗೆ ದಾನಿಗಳಿಂದ ಟೈ, ಬೆಲ್ಟ್, ಉಳಿತಾಯ ಖಾತಾ ಪುಸ್ತಕ ವಿತರಣೆ

Suddi Udaya

ಉಜಿರೆಯಲ್ಲಿ 550 ಕೆಜಿ ತೂಕದ ಮಡಲ್ ಮೀನು: ಖರೀದಿಸಲು ಮುಗಿಬಿದ್ದ ಗ್ರಾಹಕರು

Suddi Udaya

ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya

ಎಸ್. ಎಮ್ .ಎ. ಉಜಿರೆ ರೀಜಿನಲ್ ವತಿಯಿಂದ ರಂಝನ್ ಕಿಟ್ ವಿತರಣೆ

Suddi Udaya

ಸಹಾಯಕ ಪ್ರಾಧ್ಯಾಪಕಿ ಗೀತಾ ಏ.ಜೆ ರವರಿಗೆ ಪಿಎಚ್ ಡಿ ಪದವಿ

Suddi Udaya

ಚಿಬಿದ್ರೆ : ಪೆರಿಯಡ್ಕ ನಿವಾಸಿ ನಾಟಿ ವೈದ್ಯ ರಾಮಣ್ಣ ಗೌಡ ನಿಧನ

Suddi Udaya
error: Content is protected !!